ಬೆಂಗಳೂರು : ಸ್ನಾನ ಮಾಡುವುದರಿಂದ ಫ್ರೆಶ್ ಆದ ಅನುಭವ ಉಂಟಾಗುತ್ತದೆ. ಆದರೆ ಸ್ನಾನ ಮಾಡುವಾಗ ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ. ಹಾಗಾದರೆ ಆ ತಪ್ಪುಗಳು ಯಾವುದೆಂಬುದನ್ನು ಮೊದಲು ತಿಳಿಯೋಣ.
*ಪ್ರತಿದಿನ ಸಾಬೂನನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಸ್ಕಿನ್ ಹಾಳಾಗುತ್ತದೆ. ಸ್ಕಿನ್ ನಲ್ಲಿರುವ ಎಣ್ಣೆಯ ಅಂಶ ಸಂಪೂರ್ಣವಾಗಿ ನಾಶವಾಗುತ್ತದೆ. ಇದರಿಂದ ಸ್ಕಿನ್ ಡ್ರೈ ಆಗುತ್ತದೆ.
*ಕೆಲವರಿಗೆ ತುಂಬಾ ಹೊತ್ತು ಸ್ನಾನ ಮಾಡಿದರೆ ಸುಖ ಸಿಗುತ್ತದೆ. ಆದರೆ ಹೀಗೆ ಮಾಡಿದರೆ ಮಾಯಿಶ್ಚರೈಸರ್ ಕಡಿಮೆಯಾಗಿ ಸ್ಕಿನ್ ಡ್ರೈ ಆಗುತ್ತದೆ. ಹೆಚ್ಚು ಎಂದರೆ 10 ನಿಮಿಷ ಮಾತ್ರ ಸ್ನಾನ ಮಾಡಿ.
*ತಲೆಗೆ ಶಾಂಪೂ ಹಾಕಿದ ನಂತರ ಚೆನ್ನಾಗಿ ತೊಳೆಯದೆ ಇದ್ದಾರೆ ಶಾಂಪೂ ಕೂದಲಲ್ಲಿ ಹಾಗೆ ಉಳಿದರೆ ಕೂದಲಿನ ಫೋರ್ಸ್ ಬಂದ್ ಆಗುತ್ತದೆ. ಇದರಿಂದ ತಲೆಹೊಟ್ಟು ಉಂಟಾಗುವ ಸಾಧ್ಯತೆ ಕೂಡ ಇದೆ. ಹಾಗೇ ದೇಹದಲ್ಲಿ ಸೋಪ್ ಉಳಿದುಕೊಂಡರೆ ಪಿಂಪಲ್ ಆಗುವ ಸಾಧ್ಯತೆ ಇದೆ.
* ಬಿಸಿ ನೀರಿನಲ್ಲಿ ಸ್ನಾನ ಮಾಡೋದು ಮುದ ನೀಡುತ್ತದೆ ಆದರೆ ಇದರಿಂದ ನಿಮ್ಮ ಸ್ಕಿನ್ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಯಾವಾಗಲೂ ತುಸು ಬೆಚ್ಚಗಿನ ನೀರನ್ನು ಬಳಕೆ ಮಾಡಿ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ