ನವದೆಹಲಿ : ದೆಹಲಿಯಲ್ಲಿ ಕೊರೊನಾ ತಡೆಗೆ ಹೊಸ ಪ್ಲ್ಯಾನ್ ಮಾಡಿದ್ದು, ಸಮುದಾಯಗಳ ತಪಾಸಣೆಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಹಾಟ್ ಸ್ಪಾಟ್ ಗಳಲ್ಲಿ ಸಮುದಾಯದ ಪರೀಕ್ಷೆಗೆ ಮುಂದಾದ ಸರ್ಕಾರ ಕಮ್ಯೂನಿಟಿ ಟೆಸ್ಟಿಂಗ್ ಗೆ ಈಗಾಗಲೇ ಚಾಲನೆ ನೀಡಿದೆ . 66 ಹಾಟ್ ಸ್ಪಾಟ್ ನಲ್ಲಿ ಜನರ ತಪಾಸಣೆ ನಡೆಸಲಾಗುತ್ತಿದೆ. ಒಟ್ಟು 2,983 ಸ್ಯಾಂಪಲ್ಸ್ ಪರೀಕ್ಷೆ ಮಾಡಲಾಗುವುದು.
ದೆಹಲಿಯಲ್ಲಿ ನಿನ್ನೆ ಒಂದೇ ದಿನ 67 ಪ್ರಕರಣ ದಾಖಲಾಗಿದ್ದು, ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1,892ಕ್ಕೇರಿದೆ. ಈವರೆಗೆ ಕೊರೊನಾಗೆ 42 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ.