Publish Date: Sat, 14 Mar 2020 (14:45 IST)
Updated Date: Sat, 14 Mar 2020 (14:48 IST)
ಸಮಸ್ಯೆ: ನಾನು 28 ರ ತರುಣಿ. ಮದುವೆಯಾಗಿ ಹತ್ತು ತಿಂಗಳು ಆಗಿವೆ. ಗಂಡನ ಜೊತೆ ನನ್ನ ಲೈಂಗಿಕ ಸಂಬಂಧ ಉತ್ತಮವಾಗಿದೆ. ದಿನಕ್ಕೆ ಒಂದು ಬಾರಿ ಮಾತ್ರ ಸಂಪರ್ಕ ನಡೆಸುತ್ತೇವೆ.
ನನಗೆ 18 ವರ್ಷವಿದ್ದಾಗ ನನ್ನ ಪಕ್ಕದ ಮನೆ ಹುಡುಗನೊಂದಿಗೆ ಆಡುತ್ತಿದ್ದ ಸಂದರ್ಭ ಆತ ನನ್ನ ಮೊಲೆಗೆ ಕೈ ಹಾಕುತ್ತಿದ್ದ. ಹಲವು ಬಾರಿ ಬಟ್ಟೆ ಕಳಚಿ ಸಂಭೋಗ ನಡೆಸಿದ್ದ.
ಆದರೆ ಈಗ ನನಗೆ ಮದುವೆಯಾಗಿದೆ. ನನ್ನ ಗಂಡ ಸಮಾಗಮದಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆ. ಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆ. ನಾನೇ ಮೊದಲೇ ಅವರನ್ನು ಚುಂಬಿಸುವುದು, ಮುದ್ದಾಡುವುದು, ನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ.
ಆದರೆ ಒಂದು ದಿನ ಅವರು ನನ್ನಲ್ಲಿ `ನಿನಗೆ ಅನುಭವ ಇದೆಯಾ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರು. ಅಲ್ಲಿಂದ ನಂತರ ನಾನೇ ಮೊದಲಾಗಿ ಅವರ ಜೊತೆ ರೋಮ್ಯಾನ್ಸ್ ಮಾಡಲು ಹೋಗುವುದಿಲ್ಲ. ನಾನು ಹರೆಯದಲ್ಲಿ ಯುವಕನೊಂದಿಗೆ ಸೇರಿ ನಡೆಸಿದ ಲೈಂಗಿಕ ಕ್ರಿಯೆಯ ವಿಷಯ ಗಂಡನಿಗೆ ಗೊತ್ತಾಗಿರಬಹುದೇ?
ಸಲಹೆ: ನಿಮ್ಮ ಹರೆಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ. ಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ. ಈ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ.
ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದು. ಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ. ಈ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ.
ಪುರುಷ ರತಿಯಲ್ಲಿ ಯಾವಾಗಲೂ ಆ್ಯಕ್ಟೀವ್ ಪಾರ್ಟ್ ತೆಗೆದುಕೊಳ್ಳುತ್ತಾನೆ. ಹೆಂಡತಿಯನ್ನು ಆಲಂಗಿಸಿ ಕೊಳ್ಳುವುದು, ಮುದ್ದಾಡುವುದು, ಉದ್ರೇಕಗೊಳಿಸುವುದು, ಸಂಭೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆ್ಯಕ್ಟೀವ್ ಆಗಿ ಇರುತ್ತಾನೆ. ಪತ್ನಿಯಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತಾರೆ.