Publish Date: Sun, 26 Jan 2020 (22:23 IST)
Updated Date: Sun, 26 Jan 2020 (22:24 IST)
ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ.
ಆದರೆ ಈಚೆಗೆ ಅವಳು ನಿನಗೆ ಏನು ಬೇಕಾದರೂ ಮಾಡಿಕೋ ಆದರೆ ಗುಪ್ತಾಂಗ ಮಾತ್ರ ಟಚ್ ಮಾಡಬೇಡ ಅಂತಿದ್ದಾಳೆ. ಇದರಿಂದಾಗಿ ನಾನು ತುಂಬಾ ಡಿಪ್ರೆಸ್ ಆಗಿರುವೆ. ಅವಳೊಂದಿಗೆ ಜಗಳ ತೆಗೆದುಕೊಂಡು ವಾಪಸ್ ಬಂದಿರುವೆ. ಈಗ ಅವಳು ದೂರವಾಗುತ್ತಿದ್ದಾಳೆ. ಸಲಹೆ ತಿಳಿಸಿ.
ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ ತಪ್ಪು ಕಾಣುತ್ತಿಲ್ಲ. ಏಕೆಂದರೆ ಹರೆಯದಲ್ಲಿ ಮಾಡಿದ ತಪ್ಪಿಗೆ ಗರ್ಭ ಧರಿಸಿ ಮದುವೆಗೂ ಮೊದಲೇ ತೊಂದರೆ ಪಡುವುದು ಆಕೆಗೆ ಮಾತ್ರವಲ್ಲ, ಬಹುತೇಕ ವಿವೇಕವುಳ್ಳವರಿಗೆ ಇಷ್ಟ ಇರುವುದಿಲ್ಲ. ಪ್ರೀತಿ ಮಾಡುವುದು ದೊಡ್ಡದಲ್ಲ.
ಅದನ್ನು ಕೇವಲ ಕಾಮಕ್ಕಾಗಿ ಮಾತ್ರ ಪರಿಗಣಿಸಬೇಡಿ. ಒಳ್ಳೆಯ ಮನಸ್ಸಿನಿಂದ ಪ್ರೀತಿ ಮಾಡಿ ಮೊದಲು ಆಕೆಯನ್ನು ಮದುವೆಯಾಗಿ. ಆ ಬಳಿಕ ಆ ಯುವತಿ ನಿಮ್ಮ ಜತೆ ಸುಖವಾಗಿರುತ್ತಾಳೆ.