ಪ್ರಶ್ನೆ: ನಾನು 35 ವರ್ಷದ ಗೃಹಸ್ಥ. ಈ ಮೊದಲು ಸಂಬಂಧಿಕರಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಗ ಅವಳೊಂದಿಗೆ ಭರ್ಜರಿಯಾಗಿ ಸುಖ ಪಡೆದಿರುವೆ. ಮೊದಲ ಮಿಲನದ ನಂತರ ಕಡೆಪಕ್ಷ ವಾರಕ್ಕೆ ಒಮ್ಮೆಯಾದರೂ ನಾವು ಒಂದಾಗಿ ಯಾರೂ ಇಲ್ಲದ ಕಡೆ ಸೇರಿ ರತಿಕ್ರೀಡೆ ಆಡುತ್ತಿದ್ದೆವು. ಇದಾಗಿ ಹತ್ತು ವರ್ಷಗಳೇ ಕಳೆಯುತ್ತಿವೆ. ಈಚೆಗೆ ಮತ್ತೆ ಭೇಟಿಯಾದ ಮೊದಲ ಪ್ರೇಯಸಿಗೆ ಮದುವೆಯಾಗಿದೆ. ಆದರೂ ಆಕೆ ತನ್ನ ಮಗುವಿಗೆ ತಂದೆ ನಾನೇ ಆಗಬೇಕು ಅಂತ ಒತ್ತಾಯ ಮಾಡ್ತಿದ್ದಾಳೆ.
ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ ಪ್ರೀತಿಯೇ ಆಗಿರಬಹುದು. ಆದರೆ ನಿಮ್ಮ ಪ್ರೇಯಸಿಗೆ ನಿಮಗಿಂತ ಐದಾರು ವರ್ಷ ಮೊದಲೇ ಮದುವೆಯಾಗಿದೆ. ಆಕೆ ಈಗ ಗೃಹಿಣಿ. ಇನ್ನೊಬ್ಬರ ಮನೆಬೆಳಗುವ ಹೆಣ್ಣು. ನೀವು ಕೂಡ ಮದುವೆಯಾಗಿ ಮುದ್ದಾದ ಮಗುವಿನ ತಂದೆಯಾಗಿದ್ದೀರಿ. ಮದುವೆ ಆಗುವುದಕ್ಕೂ ಮೊದಲೇ ಆಕೆ ನಿಮ್ಮನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಕಾರಣ ಏನೇ ಇರಬಹುದು. ಅದು ಈಗ ಬೇಡ. ನಿಮಗೂ ಮಡದಿ, ಮಕ್ಕಳಿದ್ದಾರೆ. ಆಕೆಯ ಗಂಡನ ಕುಡಿತದಿಂದಾಗಿ ಆಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಾಳೆ.
ಆಕೆಯ ಗಂಡ ನಿಮ್ಮ ಪ್ರೇಯಸಿಗೆ ಹೊಡೆಯುತ್ತಿದ್ದಾನೆ ಎಂದೆಲ್ಲ ತಿಳಿಸಿದ್ದೀರಿ. ಒಂದು ವೇಳೆ ನಿಮ್ಮ ಮೊದಲಿನ ಪ್ರೇಯಸಿಗೆ ಉತ್ತಮ ಗಂಡ ಸಿಕ್ಕಿದ್ದು, ಶ್ರೀಮಂತನಾಗಿದ್ದರೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ ಆಗ ನಿಮ್ಮ ನೆನಪು ಆಗುತ್ತಿತ್ತಾ? ಒಮ್ಮೆ ಯೋಚಿಸಿ. ಮೊದಲಿನ ಪ್ರೀತಿಯನ್ನು ಮರೆತು ಬಿಡಿ. ಇದರಿಂದ ಅನಾಹುತಗಳೇ ಹೆಚ್ಚು. ನಿಮ್ಮ ಪತ್ನಿ, ಮಗುವಿಗೆ ನಿಮ್ಮ ಪ್ರೀತಿಯನ್ನು ಜೀವನಪೂರ್ಣ ಧಾರೆ ಎರೆಯಿರಿ.