ಸಮಸ್ಯೆ: ಮದುವೆ ಯಾಗಿ ಹತ್ತು ತಿಂಗಳಾಗಿದೆ. ಇಷ್ಟು ದಿನಗಳಾದರೂ ನಮಗಿಬ್ಬರಿಗೂ ಚೆನ್ನಾಗಿ ಸಂಭೋಗಿಸಲಾಗಿಲ್ಲ. ಸಂಭೋಗ ಕ್ರಿಯೆ ನಡೆಸುವಾಗ ದೊಪ್ಪನೆ ಮಲಗುತ್ತಾ, ಆಯ್ತಾ ಆಯ್ತಾ ಅಂತ ಹೆಂಡತಿ ಕೇಳುತ್ತಾಳೆ. ಯಾವಾಗಲೂ ನನಗೆ ಪ್ರತಿಸ್ಪಂದಿಸುವುದಿಲ್ಲ. ಸಂಭೋಗ ನಡೆಸುವಾಗ ನೋವಾಗುತ್ತದೆ ಎಂದು ಕೂಗುತ್ತಾಳೆ.
ರಾತ್ರಿಯಾಗುತ್ತಿದ್ದಂತೆ ಒಂತರಾ ನಡುಗಿದಂತೆ ವರ್ತಿಸುತ್ತಾಳೆ. ಮದುವೆಯಾಗಿ ಇಷ್ಟು ದಿನಗಳಾದರೂ ಒಮ್ಮೆಯೂ ಸುಖಸಿಗಲಿಲ್ಲ. ಅನಿವಾರ್ಯವಾಗಿ ಹಸ್ತಮೈಥುನ ಮಾಡಿಕೊಂಡು ಮಲಗುತ್ತೇನೆ. ಇದಕ್ಕೆ ಚಿಕಿತ್ಸೆ ಇದೆಯೇ?
ಸಲಹೆ: ನಿಮ್ಮ ಪತ್ನಿ ಸಂಪ್ರದಾಯಸ್ಥ ಮನೆತನದಿಂದ ಬಂದಿದ್ದರೆ ಸ್ಪಷ್ಟವಾದ ಲೈಂಗಿಕತೆಯ ನವಿರು ಅನುಭವ ಹಿತವಾಗುವುದಿಲ್ಲ. ಈ ವೇಳೆ ಆಕೆಯನ್ನು ಮುನ್ನಲಿವಿನ ಮೂಲಕ ಉದ್ರೇಕಗೊಳಿಸಿದಾಗ ಆಕೆ ತನ್ನಷ್ಟಕ್ಕೇ ಉದ್ರೇಕಗೊಂಡು ಆಸಕ್ತಿಯಿಂದ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆ. ಸ್ತ್ರೀಯು ಉದ್ರೇಕಗೊಂಡಿದ್ದಾಳೋ ಇಲ್ಲವೋ ಎಂದು ಅರಿಯುವುದು ಕಷ್ಟ.
ಸ್ವತಃ ಅಕೆಗೇ ಇದು ಅರಿವಿಗೆ ಬಾರದಿರಬಹುದು. ಯಾಕೆಂದರೆ ಉದ್ರೇಕಗೊಳ್ಳದೆಯೂ ಆಕೆ ಸಂಭೋಗ ಕ್ರಿಯೆಯಲ್ಲಿ ಭಾಗವಹಿಸಬಹುದು. ಅದರೆ ಭಾವಪ್ರಾಪ್ತಿಗೆ ಆಕೆ ಉದ್ರೇಕಗೊಳ್ಳುವುದು ಅತೀ ಮುಖ್ಯ. ಗುಪ್ತಾಂಗದೊಳಗಿನ ಸ್ರಾವ ಆಕೆ ಉದ್ರೇಕಗೊಂಡಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಮುನ್ನಲಿವಿನಲ್ಲಿ ಪಾಲ್ಗೊಂಡು ಆಕೆ ಉದ್ರೇಕಗೊಂಡಾಗ ಆಕೆಯ ಗುಪ್ತಾಂಗದಲ್ಲಿ ಸ್ರಾವ ಉಂಟಾಗಿ ಕೂಡುವಿಕೆ ಚೆನ್ನಾಗಿ ನಡೆಯುತ್ತದೆ.
ಭಾವಪ್ರಾಪ್ತಿಯ ತೊಂದರೆಗಳು ಪುರುಷರಿಗಿಂತಲೂ ಸ್ತ್ರೀಯರಲ್ಲಿ ಹಲವು ಪಟ್ಟು ಜಾಸ್ತಿ. ಸಂಭೋಗ ಕ್ರಿಯೆಯಲ್ಲಿ ಪುರುಷ ಸ್ಖಲಿಸಿದರೂ ಸ್ತ್ರೀ ಭಾವ ಪ್ರಾಪ್ತಿಯನ್ನು ಪಡೆಯಲಾರಳು. ಅವಳಿಗೆ ಸಂಭೋಗನಂತರದ ಸಲ್ಲಾಪ ಬೇಕಾಗುತ್ತದೆ. ಭಗಾಂಕುರದ ತೀಡುವಿಕೆ ಅಥವಾ ಮುಖ ಮೈಥುನದ ಅವಶ್ಯಕತೆಯಿರುತ್ತದೆ. ಅದುದರಿಂದ ಪುರುಷರು ಸ್ಖಲಿಸಿದ ಕೂಡಲೇ ಪಕ್ಕಕ್ಕೆ ತಿರುಗಿ ಮಲಗಬಾರದು ಸ್ಪರ್ಶವನ್ನು ಮುಂದುವರಿಸಬೇಕು. ಸ್ತ್ರೀ ಉದ್ರೇಕಗೊಂಡು ಭಾವ ಪ್ರಾಪ್ತಿಯ ಮಟ್ಟಕ್ಕೆ ಹೋಗದಿದ್ದರೆ ಸ್ತ್ರೀಗೆ ತುಂಬಾ ಯಾತನೆಯಾಗುತ್ತದೆ. ಗುಪ್ತಾಂಗ ಉರಿತ, ದೇಹದ ಉರಿ, ಆತಂಕ, ಕೋಪ ಎಲ್ಲವೂ ಸಾಧ್ಯ.
ಕೆಲವೊಮ್ಮೆ ಇದಕ್ಕೆ ಇತರ ದೈಹಿಕ ಮತ್ತು ಮಾನಸಿಕ ಕಾರಣಗಳೂ ಇರುವ ಸಾಧ್ಯತೆಯಿದೆ.
ಅದರೆ ಮೇಲಿನ ಎಲ್ಲಾ ತೊಂದರೆಗಳಿಗೆ ಚಿಕಿತ್ಸೆಯಿದೆ ಎಂಬುದನ್ನು ತಿಳಿದಿರಬೇಕು. ನೀವು ನಿಮ್ಮ ಹೆಂಡತಿಯನ್ನು ಲೈಂಗಿಕ ತಜ್ಞರಲ್ಲಿ ಕರೆದೊಯ್ಯುವುದು ಮುಖ್ಯ.