Select Your Language

Notifications

webdunia
webdunia
webdunia
webdunia

ಹಳೇ ಲವರ್ ಮಗು ಕರುಣಿಸು ಅನ್ನೋದಾ

ಕಪಲ್ ರೋಮ್ಯಾನ್ಸ್
ಪ್ರಶ್ನೆನಾನು 33 ವರ್ಷದ ಗೃಹಸ್ಥ. ನನ್ನ ವಿರುದ್ಧ ಗರಂ ಆದ ಹಳೇ ಪ್ರೇಯಸಿ ಮನೆಯವರು ಯಾರಿಗೂ ತಿಳಿಯದಂತೆ ನನ್ನ ಪ್ರೇಯಸಿಯನ್ನು ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡಿಬಿಟ್ರು. ಇದಾಗಿ ಐದು ವರ್ಷಗಳೇ ಕಳೆಯುತ್ತಿವೆ. ಆಕೆಗೆ ಈಗ ಮಗು ಆಗಿಲ್ಲ. ಹೀಗಾಗಿ ನನ್ನ ಮಗುವಿಗೆ ನಿನೇ ತಂದೆಯಾಗು ಅಂತೆಲ್ಲ ಈಗ ಬೆನ್ನು ಹತ್ತಿದ್ದಾಳೆ.

ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ ಪ್ರೀತಿಯೇ ಆಗಿರಬಹುದು. ಆದರೆ ನಿಮ್ಮ ಪ್ರೇಯಸಿಗೆ ನಿಮಗಿಂತ ಐದಾರು ವರ್ಷ ಮೊದಲೇ ಮದುವೆಯಾಗಿದೆ. ಆಕೆ ಈಗ ಗೃಹಿಣಿ. ಆಕೆ ಮದುವೆ ಆಗುವುದಕ್ಕೂ ಮೊದಲೇ ಆಕೆ ನಿಮ್ಮನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ನಿಮಗೂ ಮಡದಿ, ಮಕ್ಕಳಿದ್ದಾರೆ. ಆಕೆಯ ಗಂಡನ ಕುಡಿತದಿಂದಾಗಿ ಆಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಾಳೆ.

ಆಕೆಯ ಗಂಡ ನಿಮ್ಮ ಪ್ರೇಯಸಿಗೆ ಹೊಡೆಯುತ್ತಿದ್ದಾನೆ ಎಂದೆಲ್ಲ ತಿಳಿಸಿದ್ದೀರಿ. ಒಂದು ವೇಳೆ ನಿಮ್ಮ ಮೊದಲಿನ ಪ್ರೇಯಸಿಗೆ ಉತ್ತಮ ಗಂಡ ಸಿಕ್ಕಿದ್ದು, ಶ್ರೀಮಂತನಾಗಿದ್ದರೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ ಆಗ ನಿಮ್ಮ ನೆನಪು ಆಗುತ್ತಿತ್ತಾ? ಒಮ್ಮೆ ಯೋಚಿಸಿ. ಮೊದಲಿನ ಪ್ರೀತಿಯನ್ನು ಮರೆತು ಬಿಡಿ. ಇದರಿಂದ ಅನಾಹುತಗಳೇ ಹೆಚ್ಚು. ನಿಮ್ಮ ಪತ್ನಿ, ಮಗುವಿಗೆ ನಿಮ್ಮ ಪ್ರೀತಿಯನ್ನು ಜೀವನಪೂರ್ಣ ಧಾರೆ ಎರೆಯಿರಿ. 


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿಗೆ ಯಾವ ವಯಸ್ಸಲ್ಲಿ ಕಾಮ ಹೆಚ್ಚು ಇರುತ್ತದೆ?