Publish Date: Wed, 11 Dec 2019 (06:05 IST)
Updated Date: Wed, 11 Dec 2019 (06:12 IST)
ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ವ್ಯಕ್ತಿ , ನಾನು ಯಾವತ್ತು ಯಾವುದೇ ಮಹಿಳೆಯೊಂದಿಗೆ ಸಂಬಂಧ ಹೊಂದಿಲ್ಲ. ಆದರೆ ನನಗೆ ಅನೇಕ ಮಹಿಳಾ ಸ್ನೇಹಿತರಿದ್ದಾರೆ. ಅವರೊಂದಿಗೆ ನಾನು ಹ್ಯಾಂಗ್ ಔಟ್ ಮಾಡಲು ಇಷ್ಟಪಡುತ್ತೇನೆ. ಆದರೆ ನಾನು ಅವರ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗಿಲ್ಲ. ಹಾಗೇ ಪುರುಷರ ಮೇಲೂ ಮೋಹವನ್ನು ಹೊಂದಿಲ್ಲ.ಹಾಗಾದ್ರೆ ನಾನು ಸಲಿಂಗಕಾಮಿಯೇ?
ಉತ್ತರ : ನಿಮಗೆ ಪುರುಷರ ಬಗ್ಗೆ ಯಾವುದೇ ಭಾವನೆಗಳು ಹಾಗೂ ಬಯಕೆ ಇಲ್ಲ ಎಂದು ನೀವೇ ವೀಕ್ಷಣೆ ಮಾಡಿಕೊಂಡಿರುವುದರಿಂದ ನಿಮ್ಮ ನಿರ್ಧಾರವನ್ನು ಸದ್ಯಕ್ಕೆ ಒಪ್ಪಿಕೊಳ್ಳುವಂತೆ ನಾನು ಸೂಚಿಸುತ್ತೇನೆ. ಹೆಚ್ಚಿನ ಮಾಹಿತಿ ತಿಳಿಯಲು ನೀವು ಲೈಂಗಿಕ ಸಲಹೆಗಾರರನ್ನು ಭೇಟಿ ಮಾಡಬಹುದು.