ಬೆಂಗಳೂರು : ಪ್ರತಿಯೊಬ್ಬರು ಸುಂದರವಾದ ಕೂದಲು ಮತ್ತು ಚರ್ಮವನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ದುಬಾರಿ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ಬಳಸುತ್ತಾರೆ. ಆರೋಗ್ಯವಂತ ಕೂದಲು ಮತ್ತು ಚರ್ಮವನ್ನು ಪಡೆಯಲು ಹೊರಗಿನಿಂದ ಮಾತ್ರವಲ್ಲ ಒಳಗಿನಿಂದ ಕೂಡ ಪೋಷಣೆ ಮಾಡಬೇಕು. ಅದಕ್ಕಾಗಿ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ ಮೂರು ಬೀಜಗಳನ್ನು ತಪ್ಪದೇ ಸೇವಿಸಬೇಕು.
*ಅಗಸೆ ಬೀಜ : ಇದು ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಮತ್ತು ಮುಖದಲ್ಲಿ ಗುಳ್ಳೆಗಳು ಮೂಡುವುದನ್ನು ತಡೆಯುತ್ತದೆ. ನಿಮ್ಮ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ದೇಹದ ವಿಷ ಹೊರಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ.
*ಚಿಯಾ ಬೀಜಗಳು : ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಸುಕ್ಕುಗಳನ್ನು ನಿವಾರಿಸಿ ಚರ್ಮವನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ.
*ಸೂರ್ಯಕಾಂತಿ ಬೀಜ : ಇದರಲ್ಲಿ ವಿಟಮಿನ್ ಎ,ಬಿ,ಬಿ1 ಸಮೃದ್ಧವಾಗಿದೆ. ಇದರಲ್ಲಿರುವ ಮೆಗ್ನಿಶಿಯಂ ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.