Publish Date: Wed, 03 Feb 2021 (07:08 IST)
Updated Date: Wed, 03 Feb 2021 (07:09 IST)
ಬೆಂಗಳೂರು : ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಗೆ ಸಂಬಂಧಪಟ್ಟ ಕಾಯಿಲೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಈರುಳ್ಳಿಯ ಸಿಪ್ಪೆಗಳನ್ನು ನಾವು ವೆಸ್ಟ್ ಎಂದು ಎಸೆಯುತ್ತೇವೆ. ಆದರೆ ಇದರಿಂದ ಕೂದಲನ್ನು ಕಲರ್ ಮಾಡಬಹುದು.
ಈರುಳ್ಳಿ ಸಿಪ್ಪೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ ಸುಮಾರು 1 ಗಂಟೆಗಳ ಕಾಲ ಕುದಿಸಿ. ರಾತ್ರಿಯಿಡಿ ತಣ್ಣಗಾಗಲು ಬಿಡಿ. ಮರುದಿನ ಅದನ್ನು ಸೋಸಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ. ನಿಮಗೆ ಹೆಚ್ಚಾಗಿ ಬಣ್ಣ ಬರಬೇಕೆಂದರೆ ಇದನ್ನು ಪುನರಾವರ್ತಿಸಿ. ಇದರಿಂದ ಕೂದಲಿಗೆ ನೈಸರ್ಗಿಕವಾದ ಬಣ್ಣ ಬರುತ್ತದೆ. ಕೂದಲು ಆರೋಗ್ಯವಾಗಿರುತ್ತದೆ.