Publish Date: Tue, 01 Oct 2019 (13:04 IST)
Updated Date: Tue, 01 Oct 2019 (13:06 IST)
ರತಿಸುಖ ಗಂಡು-ಹೆಣ್ಣಿನ ಸಹಜ ಬಯಕೆಯಾಗಿದ್ರೂ ಸಹ ಕೆಲವೊಂದು ಬಾರಿ ಅದರಿಂದ ದೂರ ಉಳಿದರೆ ಸೂಕ್ತ.
ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಹಲವು ಸಮಸ್ಯೆಗಳು ಬರಬಹುದು. ಅವುಗಳು ಯಾವುವು ನೋಡೋಣ.
ಮುಖ್ಯವಾಗಿ ಗರ್ಭಿಣಿಯಾಗಿದ್ದಾಗ ಸಮಾಗಮ ಮಾಡುವುದು ಹುಟ್ಟುವ ಮಗುವಿಗೆ ಅಪಾಯ ತಂದೊಡ್ಡಬಹುದು. ಕೆಲವೊಮ್ಮೆ ಗರ್ಭಪಾತವಾಗುವ ಸಂಭವವೂ ಇರುತ್ತದೆ.
ಇನ್ನು ಕೆಲವೊಮ್ಮೆ ಈ ಸಂದರ್ಭದಲ್ಲಿ ಸಂಭೋಗ ಮಾಡುವುದರಿಂದ ಅವಧಿಗೆ ಮುನ್ನ ಡೆಲಿವರಿ, ಗರ್ಭಾಶಯದ ಸಮಸ್ಯೆ ಬರುವುದು, ಯೋನಿಯಲ್ಲಿ ಸ್ರಾವವಾಗುವುದು, ಯೋನಿಯ ಸೋಂಕು ಮುಂತಾದ ಸಮಸ್ಯೆ ಬರಬಹುದು.
ಇಂತಹ ಸಮಸ್ಯೆಗಳೂ ಗರ್ಭಪಾತಕ್ಕೆ ಕಾರಣವಾಗಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದುಕೊಂಡು ಲೈಂಗಿಕ ಕ್ರಿಯೆಯ ಬಗ್ಗೆ ಆಲೋಚನೆ ಮಾಡುವುದು ಸೂಕ್ತ.