ಬೆಂಗಳೂರು: ಬಿಸಿ ಬಿಸಿ ಕಾಪಿಯೋ ಇನ್ನಾವುದಾದರೂ ಪಾನೀಯ ಕುಡಿದು ಬಾಯಿ ಸುಟ್ಟುಕೊಂಡರೆ ಕೆಲವು ಗಂಟೆಗಳ ಕಾಲ ಬಾಯಿ ರುಚಿಯೇ ಹಾಳಾಗಿರುತ್ತದೆ. ಹಾಗಿದ್ದರೆ ಏನು ಮಾಡಬೇಕು? ಅದಕ್ಕೆ ಕೆಲವು ಮನೆ ಮದ್ದುಗಳಿವೆ.
ಸಕ್ಕರೆ : ಬಾಯಿ ಸುಟ್ಟುಕೊಂಡರೆ ಒಂಚೂರು ಸಕ್ಕರೆ ಅಥವಾ ಕಲ್ಲು ಸಕ್ಕರೆ ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ.
ಪುದೀನಾ: ಪುದೀನಾ ಎಲೆ ಎಂದರೆ ಖಾರ ಖಾರವಾಗಿರುತ್ತದೆ. ಆದರೂ ಬಾಯಿ ಸುಟ್ಟುಕೊಂಡರೆ ಪುದೀನಾ ಎಲೆಗಳನ್ನು ಜಗಿಯಿರಿ.
ಜೇನುತುಪ್ಪ: ಯಾವುದೇ ಸುಟ್ಟ ಹಾಯಕ್ಕೂ ಜೇನು ತುಪ್ಪ ಒಳ್ಳೆಯ ಮದ್ದು. ಹಾಗೆಯೇ ಬಾಯಿ ಸುಟ್ಟಿದ್ದರೂ ಜೇನು ತುಪ್ಪ ಸೇವಿಸಿ.
ಮಜ್ಜಿಗೆ: ಬಾಯಿ ಸುಟ್ಟುಕೊಂಡ ತಕ್ಷಣ ಮಜ್ಜಿಗೆ ಕುಡಿಯಿರಿ.
ಅಲ್ಯುವೀರಾ: ಅಲ್ಯುವೀರಾ ಬಾಯಿ ಉರಿ, ಮತ್ತು ಸಂವೇದನೆ ಕಳೆದುಕೊಂಡಿದ್ದರೂ, ಅದನ್ನು ಮರಳಿ ಪಡೆಯುವುದಕ್ಕೆ ಸಹಾಯ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ