ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರನ್ನು ಕಾಡುತ್ತಿರುವ ಗಂಭೀರ ಖಾಯಿಲೆಯೆಂದರೆ ಸ್ತನ ಕ್ಯಾನ್ಸರ್ ಕೂಡಾ ಒಂದು. ಇದರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ.
ಹಲವು ಅಧ್ಯಯನಗಳಿಂದ ತಿಳಿದುಬಂದಿದ್ದೇನೆಂದರೆ ಸಂಸ್ಕರಿತ ಮಾಂಸ ಸೇವನೆ ಮಾಡುವವರಲ್ಲಿ ಸ್ತನ ಕ್ಯಾನ್ಸರ್ ನ ಅಪಾಯ ಹೆಚ್ಚು ಎನ್ನಲಾಗಿದೆ. ಶೇ. 9 ರಷ್ಟು ಅಪಾಯ ಹೆಚ್ಚಿದೆಯೆಂದು ಹಲವು ಅಧ್ಯಯನಗಳ ನಂತರ ತೀರ್ಮಾನಕ್ಕೆ ಬರಲಾಗಿದೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಸಾರಗೊಂಡ ವರದಿ ಪ್ರಕಾರ ಸಂಸ್ಕರಿತ ಮಾಂಸ ಸೇವಿಸುವ ಮಹಿಳೆಯರಲ್ಲಿ ಶೇ. 9 ರಷ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಆದರೆ ಅದಕ್ಕೆ ನಿಖರ ಕಾರಣವೇನೆಂದು ಅಧ್ಯಯನಕಾರರು ಸಂಶೋದನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.