ಬೆಂಗಳೂರು : ಪ್ರತಿಯೊಂದು ರಿಲೇಶನ್ ಕೂಡ ಸ್ಪೆಷಲ್ ಆಗಿದೆ. ಆದರೂ ಸಹ ಪುರುಷರು ಕೆಲವೊಂದು ವಿಷಯಗಳನ್ನು ತಮ್ಮ ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಇವುಗಳನ್ನು ನಿಮ್ಮ ಮುಂದೆ ಮಾಡಲು ಪುರುಷರು ತುಂಬಾನೆ ಭಯಪಡುತ್ತಾರೆ. ಅಂತಹ ಸಂಗತಿಗಳು ಯಾವುವು ನೋಡಿ.
ಅಳುವುದು : ಅವರು ಯಾವತ್ತೂ ನಿಮ್ಮ ಮುಂದೆ ಅಳೋದಿಲ್ಲ. ಸಂಗಾತಿ ಜೀವನದಲ್ಲಿ ಪುರುಷರು ಯಾವಾಗಲೂ ತಾವು ಸ್ಟ್ರಾಂಗೆಸ್ಟ್ ಪರ್ಸನ್ ಅನ್ನೋದನ್ನು ತೋರಿಸುತ್ತಾರೆ. ಅಲ್ಲದೆ ಅವರು ಮಹಿಳೆಯರ ಮುಂದೆ ವೀಕ್ ಆಗಿ ಕಾಣಲು ಇಷ್ಟಪಡೋದಿಲ್ಲ.
ಫೇಸ್‌ಬುಕ್ ನೋಡೋದು : ಪುರುಷರು ತಮ್ಮ ಸಂಗಾತಿಯ ಮುಂದೆ ತಮ್ಮ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಲು ಸಹ ಭಯ ಪಡುತ್ತಾರೆ. ಇದು ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಭಯ ಇರುತ್ತದೆ.
ಗರ್ಲಿ ಮೂವಿ ನೋಡಲು : ಆ ಮೂವಿ ಅದೆಷ್ಟೇ ಜನಪ್ರಿಯತೆ ಗಳಿಸಿದ್ದರೂ ಕೂಡ, ಅದು ಮಹಿಳಾ ಪ್ರಧಾನ ಚಿತ್ರವಾಗಿದ್ದರೆ ಅವರು ಯಾವತ್ತೂ ಅದನ್ನು ನಿಮ್ಮ ಮುಂದೆ ನೋಡೊದೆ ಇಲ್ಲ. ಏಕಾಂತವಾಗಿದ್ದಾಗ ನೋಡುತ್ತಾರೆ ಅಷ್ಟೇ.
ನೋವನ್ನು ಹಂಚುವುದು : ಏನಾದರೂ ಭಾರವನ್ನು ಎತ್ತಿದಾಗ ನೋವು ಉಂಟಾದರೆ ಅಥವಾ ಸಣ್ಣ ಆಕ್ಸಿಡೆಂಟ್ ಆದಾಗ ನೋವಾದರೆ ಅವರು ತಮ್ಮಲ್ಲೆ ನೋವು ಅನುಭವಿಸುತ್ತಾರೆ. ಆದರೆ ಅದನ್ನು ನಿಮ್ಮೆದುರು ಯಾವತ್ತೂ ರಿವೀಲ್ ಮಾಡೋದಿಲ್ಲ.
ದಾರಿಯನ್ನು ಕೇಳೋದು : ಅವರು ಪೂರ್ತಿಯಾಗಿ ದಾರಿ ತಪ್ಪಿದಾಗ, ತಮಗೆ ಎಲ್ಲಾ ಗೊತ್ತಿದೆ ಎಂದು ಅವರು ಅಂದುಕೊಳ್ಳುತ್ತಾರೆ. ಆದರೆ ಯಾವತ್ತೂ ಯಾರ ಮುಂದೆಯೂ ತಮಗೆ ಗೊತ್ತಿಲ್ಲ ಎಂದು ಹೇಳೋದಿಲ್ಲ.
ಹಣ ಇಲ್ಲದೆ ಇದ್ದಾಗ : ಕೆಲವೊಮ್ಮೆ ಅವರ ಬಳಿಯೂ ಹಣದ ಶಾರ್ಟೆಜ್ ಉಂಟಾಗುತ್ತದೆ. ಆದರೆ ಅದನ್ನು ಸಹ ಸಂಗಾತಿಯ ಜೊತೆ ಅವರು ಹಂಚಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ಫ್ರೆಂಡ್ಸ್‌ಗಳ ಜೊತೆ ಹಣ ಕೇಳುತ್ತಾರೆ. ಸಮಸ್ಯೆ ನಿವಾರಣೆ ಮಾಡಿಕೊಳ್ಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ