ಬೆಂಗಳೂರು: ಪ್ರತಿನಿತ್ಯ ಎರಡು ಬಾರಿ ಸ್ನಾನ ಮಾಡುವುದು ಉತ್ತಮ ಅಭ್ಯಾಸ ಎಂದು ಚಿಕ್ಕವರಿಂದಲೇ ಓದುತ್ತೇವೆ. ನಿಜವಾಗಿಯೂ ದಿನಕ್ಕೆರಡು ಬಾರಿ ಸ್ನಾನ ಮಾಡುವುದರಿಂದ ಎಂಥಾ ಲಾಭವಾಗುತ್ತದೆ ಗೊತ್ತಾ?
ಸಂಜೆ ಕೆಲಸ ಮುಗಿಸಿ ಬಂದ ಬಳಿಕ ಒತ್ತಡ, ಸುಸ್ತು ಮರೆತು, ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕೆಂದರೆ ರಾತ್ರಿಯೂ ಸ್ನಾನ ಮಾಡುವುದು ಉತ್ತಮ. ಬೆಳಗ್ಗೆ ಸ್ನಾನ ಮಾಡಿ ಕೆಲಸ, ಕಾರ್ಯಗಳಿಗೆ ಹೋಗುವುದರಿಂದ ಮನಸ್ಸೂ ಉಲ್ಲಾಸದಾಯಕವಾಗಿರುತ್ತದೆ.
ಅದರಲ್ಲೂ ವಿಶೇಷವಾಗಿ ಪುರುಷರಿಗೆ ದಿನಕ್ಕೆರಡು ಬಾರಿ ಸ್ನಾನ ಮಾಡಿದಲ್ಲಿ ಗಡ್ಡ ಮೀಸೆ ಚೆನ್ನಾಗಿ ಬರುತ್ತಂತೆ! ಬೆಳಗ್ಗೆ ಶೇವ್ ಮಾಡಿದ ಬಳಿಕ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ರಂಧ್ರಗಳು ಚೆನ್ನಾಗಿ ಓಪನ್ ಆಗಿ ಸರಿಯಾಗಿ ಕೂದಲು ಬೆಳೆಯಲು ಸಹಕರಿಸುತ್ತದೆ ಎನ್ನುವುದು ತಜ್ಞರ ಅಭಿಮತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.