ಬೆಂಗಳೂರು: ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಆದರೆ ಆಪಲ್ ಬೀಜ ಮಾತ್ರ ಅಪ್ಪಿ ತಪ್ಪಿಯೂ ಸೇವಿಸದಿರಿ. ಇದರ ಪರಿಣಾಮ ಎಷ್ಟೆಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ.
ಹೌದು ಆಪಲ್ ಬೀಜ ತಿನ್ನುವುದು ನಿಮ್ಮ ಜೀವಕ್ಕೇ ಕುತ್ತು ತರಬಹುದು. ಇದರ ಬೀಜದಲ್ಲಿ ಅಂತಹ ವಿಷಕಾರಿ ಅಂಶ ಹೊರ ಸೂಸುವ ಶಕ್ತಿಯಿದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಇದರ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ಅಂಶ ಮಾನವ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆಯಂತೆ.
ಹೀಗಾಗಿ ಈ ಸೈನೈಡ್ ಅಂಶ ನಿಮ್ಮ ದೇಹಕ್ಕೆ ಮಾರಣಾಂತಿಕ ಪರಿಣಾಮ ಅಥವಾ ಸಾವು ತರಬಲ್ಲದು ಎಂದು ತಜ್ಞರು ಕಂಡುಕೊಂಡಿದ್ದಾರೆ. ಸೈನೈಡ್ ಎಷ್ಟು ಅಪಾಯಕಾರಿ ಎಂದು ಗೊತ್ತಲ್ಲ? ಇದು ಆಕ್ಸಿಜನ್ ಪೂರೈಕೆಗೆ ತಡೆಯೊಡ್ಡಿ ನಮ್ಮ ಜೀವಕ್ಕೆ ಕುತ್ತು ತರುತ್ತದಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ