ಬೆಂಗಳೂರು: ಎಲ್ಲರಿಗೂ ತಾವು ಬೆಳ್ಳಗೆ ಇರಬೇಕಂತ ಆಸೆ ಇದ್ದೆ ಇರುತ್ತೆ. ಬೆಳ್ಳಗಿರುವವರನ್ನು ಕಂಡಾಗ ತಾನು ಹಾಗಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನಿಸಿರುತ್ತೆ. ಅಂತವರು ಬ್ಯೂಟಿ ಪಾರ್ಲರಿಗೆ ಹೋಗಿ ಫೇಶಿಯಲ್, ಬ್ಲಿಚ್ ಅಂತ ಹೆಚ್ಚಿನ ಹಣ ಸುರಿಯುವ ಬದಲು ಮನೆಯಲ್ಲೆ ತಯಾರಿಸುವ ನೈಸರ್ಗಿಕ ವಿಧಾನ ಬಳಸಿ.
ತರಕಾರಿಗಳಲ್ಲೊಂದಾದ ಆಲೂಗಡ್ಡೆ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯನ್ನು ಬೇಯಿಸಿ ನಂತರ ಅದರ ಸಿಪ್ಪೆ ತೆಗೆದು ನುಣ್ಣಗೆ ಮಾಡಿ, ನಂತರ ಅದಕ್ಕೆ 3 ಚಮಚ ಹಾಲು ಅಥವಾ ಮೊಸರನ್ನು ಸೇರಿಸಿ, 1 ಚಮಚ ಜೇನುತುಪ್ಪ ಹಾಕಿ ಮಿಕ್ಸ ಮಾಡಿ. ಆಮೇಲೆ ಅದಕ್ಕೆ ½ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ ಮಾಡಿ ಪ್ಯಾಕ್ ರೆಡಿ ಮಾಡಿ.
ಈ ಪ್ಯಾಕನ್ನು ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ.ಇದನ್ನು ಪ್ರತಿದಿನ ಮಾಡುವುದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ