ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಣ‍್ಣ ಮಕ್ಕಳಿಂದ ವಯಸ್ಕರ ತನಕ ಹೆಚ್ಚಿನವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ನಾವು ಸೇವಿಸುವ ದೈನಂದಿನ ಆಹಾರಗಳಿಂದಲೇ ಕ್ಯಾನ್ಸರ್ ಎಂಬ ಮಾರಕಕ್ಕೆ ತುತ್ತಾಗುತ್ತಿದ್ದೇವೆ ಎಂಬ ಶಾಕಿಂಗ್ ಸಂಗತಿಯನ್ನು ವೈದ್ಯಲೋಕ ತಿಳಿದುಬಂದಿದೆ.
ಹೌದು. ನಾವು ಸೇವಿಸುವ ಆಹಾರಗಳು ನಮ್ಮ ದೇಹದಲ್ಲಿ ಕೊಬ್ಬಿನಾಂಶವನ್ನು ಅಧಿಕಗೊಳಿಸಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
*ಟೊಮ್ಯಾಟೊ ಪೇಸ್ಟ್ ನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಲು ಬಿಸ್ಫೆನಾಲ್-ಎ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಡಬ್ಬಾದಲ್ಲಿ ಸಿಗುವ ಇಂತಹ ಟೊಮ್ಯಾಟೊ ಪೇಸ್ಟ್ಗಳನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ.
*ಮಾಂಸಾಹಾರಗಳನ್ನು ಕೆಡದಂತೆ ಸಂರಕ್ಷಿಸಿಡಲು ಸೋಡಿಯಂ ನೈಟ್ರೈಟ್ ರಾಸಾಯನಿಕವನ್ನು ಬಳಸುತ್ತಾರೆ. ಈ ರೀತಿಯ ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಕ್ಯಾನ್ಸರ್ ರೋಗಕ್ಕೆ ಗುರಿಯಾಗುತ್ತೀರಿ.
* ಮೈಕ್ರೋವೇವ್ ನಲ್ಲಿ ತಯಾರಿಸಿದ ಪಾಪ್ ಕಾರ್ನ್ ನಲ್ಲಿ ಪರ್ಫ್ಯೂಕ್ಟಾನೊಯಿಕ್ ಎಂಬ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಹೀಗೆ ಸಿದ್ಧಪಡಿಸುವ ಪಾಪ್ ಕಾರ್ನ್ ನಿಂದ ಕ್ಯಾನ್ಸರ್ ರೋಗದ ಅಪಾಯ ಹೆಚ್ಚಿದೆ.
* ದೀರ್ಘಕಾಲದವರೆಗೆ ಫ್ರಿಜ್ನಲ್ಲಿಡುವ ಹಣ್ಣುಗಳು ನೋಡಲು ತಾಜಾತಣದಿಂದ ಕೂಡಿರುತ್ತದೆ. ಆದರೆ ಇಂತಹ ಹಣ್ಣುಗಳ ಪದರದ ಮೇಲೆ ರಾಸಾಯನಿಕ ಅಂಶಗಳು ಉಳಿದುಕೊಂಡಿರುತ್ತದೆ. ಇವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ಸಂಭವಿಸುತ್ತದೆ.
* ಆಲೂಗಡ್ಡೆ ಚಿಪ್ಸ್ಗಳನ್ನು ಸೋಡಿಯಂ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ. ಇದರಿಂದ ಕೂಡ ಕ್ಯಾನ್ಸರ್ ರೋಗ ಉಂಟಾಗಬಹುದು.
* ತರಕಾರಿಗಳು ಮತ್ತು ಸಸ್ಯಗಳಿಂದ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೈಡ್ರೋಜನೀಕರಿಸಿದ (ಘನೀಕೃತ) ತೈಲಗಳನ್ನು ತೆಗೆಯಲಾಗುತ್ತದೆ. ಇಂತಹ ತೈಲಗಳಲ್ಲಿ ಒಮೆಗಾ-6 ಪ್ರಮಾಣ ಅಧಿಕವಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.