ಬೆಂಗಳೂರು : ರಾತ್ರಿ ವೇಳೆ ಊಟವಾದ ಬಳಿಕ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಆದರೆ ಕೆಲವು ಹಣ್ಣುಗಳನ್ನು ರಾತ್ರಿ ತಿಂದರೆ ಸಮಸ್ಯೆಯನ್ನುಂಟು ಮಾಡುತ್ತವೆ.
ಆದರೆ ರಾತ್ರಿ ವೇಳೆ ಮಾವಿನ ಹಣ್ಣನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿದೆ.
*ರಾತ್ರಿ ವೇಳೆ ಮಾವಿನ ಹಣ್ಣು ಸೇವನೆ ಮಾಡಿದರೆ, ಆಗ ಜೀರ್ಣಕ್ರಿಯೆ ಪ್ರಕ್ರಿಯೆಯು ಉತ್ತೇಜನಗೊಳ್ಳುವುದು. ಇದರಿಂದಾಗಿ ಬೆಳಗ್ಗೆ ಯಾವುದೇ ರೀತಿಯ ಜೀರ್ಣಕ್ರಿಯೆ ಸಮಸ್ಯೆಯು ಕಾಣಿಸದು.
* ಮಾವಿನ ಹಣ್ಣುಗಳನ್ನು ಸೇವನೆ ಮಾಡಿದರೆ ಹಸಿವು ಕಡಿಮೆ ಆಗುವುದು. ಆದ್ದರಿಂದ ಮಧ್ಯರಾತ್ರಿ ವೇಳೆ ಹಸಿವು ಕಾಡದು.
* ಮಾವಿನ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಫ್ರಾಕ್ಟೋಸ್ ಇದೆ. ಮಾವಿನ ಹಣ್ಣನ್ನು ರಾತ್ರಿ ವೇಳೆ ಸೇವಿಸಿದರೆ ಅದರಿಂದ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲದೆ ಅನಾರೋಗ್ಯಕಾರಿ ಆಹಾರ ಸೇವನೆಯಿಂದ ಉಂಟಾಗುವ ತೂಕ ಹೆಚ್ಚಳ ಕೂಡ ಕಡಿಮೆ ಮಾಡಬಹುದು.
* ಮಾವಿನ ಹಣ್ಣಿನಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ರಕ್ತದೊತ್ತಡ ನಿಯಂತ್ರಣ ಮಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡಿದರೆ ಆಗ ನಿದ್ರಿಸುವ ವೇಳೆ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುವುದು.
* ಮಾವಿನ ಹಣ್ಣಿನಲ್ಲಿ ಉರಿಯೂತ ಶಮನಕಾರಿ ಗುಣಗಳು ಇದೆ. ಇದು ವಾಯುನಾಳದಲ್ಲಿ ಇರುವಂತಹ ಉರಿಯೂತವನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ಆದ್ದರಿಂದ ಅಸ್ತಮಾದ ಲಕ್ಷಣಗಳನ್ನು ನಿವಾರಣೆ ಮಾಡಲು ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.