ಬೆಂಗಳೂರು : ಕೆಲವರಿಗೆ ಪದೇ ಪದೇ ಬಾಯಾರಿಕೆಯಾಗುತ್ತಿರುತ್ತದೆ. ಎಷ್ಟೇ ನೀರು ಕುಡಿದರೂ ಅವರ ಬಾಯಾರಿಕೆ ಕಡಿಮೆಯಾಗಲ್ಲ. ಅಂತವರು ಈ ಮನೆಮದ್ದನ್ನು ಬಳಸಿ ಕಡಿಮೆಮಾಡಿಕೊಳ್ಳಿ.
ಕ್ಯಾರೆಟ್ ಪೇಸ್ಟ್ 5 ಟೇಬಲ್ ಚಮಚ ತೆಗೆದುಕೊಂಡು ಅದಕ್ಕೆ 10 ಟೇಬಲ್ ಚಮಚದಷ್ಟು ಕಿತ್ತಳೆ ರಸ, ಕಲ್ಲುಸಕ್ಕರೆ ½ ಟೀ ಚಮಚ , ಏಲಕ್ಕಿ ಪುಡಿ1 ಚಿಟಿಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಿ. ಇದರಿಂದ ನಿಮಗೆ ಪದೇ ಪದೇ ಬಾಯಾರಿಕೆಯಾಗುವುದು ಕಡಿಮೆಯಾಗುತ್ತದೆ. ಇದನ್ನು 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.
ಅಷ್ಟೇ ಅಲ್ಲದೇ ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಕೊಡುತ್ತದೆ, ಜೀರ್ಣ ಶಕ್ತಿ ಹೆಚ್ಚಿಸುತ್ತೆ, ಸುಸ್ತು ಕಡಿಮೆ ಮಾಡುತ್ತೆ, ಚೆನ್ನಾಗಿ ಹಸಿವಾಗುತ್ತೆ ಹಾಗೇ ಇದನ್ನು ಸೇವಿಸುವುದರಿಂದ ಮಿಟಮಿನ್ ಕೊರತೆ ಬರಲ್ಲ. ದೇಹದ ವಿಷದ ರೂಪದಲ್ಲಿರುವ ವಸ್ತುಗಳನ್ನು ಮಲದ ಮೂಲಕ ಹೊರಹಾಕುತ್ತದೆ. ಜೊತೆಗೆ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.