ಬೆಂಗಳೂರು: ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕೂದಲು ತೇವಾಂಶ ಕಳೆದುಕೊಂಡು ಒರಟಾಗುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಕೂದಲಿನ ಹೊರ ಪದರವನ್ನು ಹಾನಿಗೊಳ್ಳಿಸುವುದರಿಂದ ಅದು ಒರಟಾಗುತ್ತದೆ. ಇದರಿಂದ ಕೂದಲನ್ನು ಎಷ್ಟೇ ಬಾಚಿದರೂ ಅದು ಕೆದರಿಕೊಂಡು ಇರುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.
ಕೂದಲಿಗೆ ರಾಸಾಯನಿಕ ವಸ್ತುಗಳನ್ನು ಬಳಸಿ ಕೂದಲನ್ನು ಮತ್ತಷ್ಟು ಹಾಳು ಮಾಡಿಕೊಳ್ಳುವ ಬದಲು ಬೇಸಿಗೆಯಲ್ಲಿ ಕೂದಲಿನ ತೇವಾಂಶ ಕಾಪಾಡಲು ಮನೆಯಲ್ಲೆ ನೈಸರ್ಗಿಕವಾಗಿ ತಯಾರಿಸುವಂತಹ ಮಾಯಿಶ್ಚರೈಸರ್ ಬಳಸಿ. ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಒಂದು ಚಮಚ ನಿಂಬೆ ರಸ, ಆಲಿವ್ ಆಯಿಲ್ ಗೆ ಮೂರು ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ನಂತರ ಅರ್ಧಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಕೂದಲು ನಯವಾಗಿ ಹೊಳೆಯುತ್ತಿರುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.