ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಸಸ್ಯಗಳಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಅವುಗಳಿಗೆ ವಿಶೇಷವಾದ ಸ್ಥಾನ ನೀಡಲಾಗಿದೆ. ಅಲ್ಲದೇ ಸಸ್ಯ, ಮರ ಗಿಡಗಳು ಅದೃಷ್ಟದ ಸಂಕೇತವೆಂದು ನಂಬಿಕೆ ಇರುವ ಕಾರಣ ಅವುಗಳನ್ನು ಪೂಜಿಸುತ್ತಾರೆ, ಇಂತಹ ಸಸ್ಯಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ನಿಮಗೆ ಅದೃಷ್ಟ ಒಲಿದುಬರುತ್ತದೆ ಎನ್ನಲಾಗಿದೆ.
ಅದರಲ್ಲಿ ಮುಖ್ಯವಾದದ್ದು ಅಲೋವೇರಾ ಗಿಡ. ಇದು ಬರೀ ಆರೊಗ್ಯವನ್ನು ಕಾಪಾಡಲು, ಅಂದವನ್ನು ಹೆಚ್ಚಿಸಲು ಮಾತ್ರ ಸಹಕಾರಿಯಲ್ಲ. ಇದರಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದಂತೆ. ಇದರ ಒಂದೊಂದು ಮುಳ್ಳಿನಲ್ಲೂ ದೇವತೆಗಳು ವಾಸವಿರುತ್ತಾರಂತೆ.
ಈ ಗಿಡ ನೀರು, ಮಣ್ಣು ಇಲ್ಲದೇ ಬರೀ ಗಾಳಿಯಲ್ಲಿಬದುಕುವುದರಿಂದ ಇದನ್ನು ಮನೆಯ ಮುಖ್ಯದ್ವಾರದ ಮೇಲೆ ಬೇರು ಮೇಲ್ಗಡೆ ಬರುವ ಹಾಗೇ ತಲೆಕೆಳಗಾಗಿ ಕಟ್ಟಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗಿ ಮನೆಯೊಳಗೆ ಪ್ರವೇಶಿಸುತ್ತಾಳಂತೆ. ಅಂತಹ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ನೆಲೆಸಿರುತ್ತದೆಯಂತೆ.