ಬೆಂಗಳೂರು : ಚಳಿಗಾಲದಲ್ಲಿ ತುಟಿಗಳು ಹೆಚ್ಚಾಗಿ ಡ್ರೈ ಆಗಿ ಒಡೆಯುತ್ತದೆ. ಹಾಗಾಗಿ ತುಟಿಗಳನ್ನು ಮೃದುಗೊಳಿಸಲು ತೆಂಗಿನೆಣ್ಣೆ ತುಂಬಾ ಸಹಕಾರಿ. ಹಾಗಾಗಿ ತೆಂಗಿನೆಣ್ಣೆಯಿಂದ ಲಿಪ್ ಬಾಮ್ ತಯಾರಿಸಿ.
1 ಚಮಚ ಪೆಟ್ರೋಲಿಯಂ ಜೆಲ್ಲಿಯನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ. 20 ನಿಮಿಷಗಳ ಕಾಲ ಫ್ರೀಜ್ ಮಾಡಿ. ಇದನ್ನು ತುಟಿಗಳಿಗೆ ಹಚ್ಚಿದರೆ ತುಟಿಗಳು ಮೃದುವಾಗಿ ಹೊಳೆಯುತ್ತದೆ.
ಹಾಗೇ 1 ಚಮಚ ಕೋಕೋ ಬೆಣ್ಣೆಯನ್ನು ಕರಗಿಸಿ ಅದಕ್ಕೆ 2 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಇದನ್ನು 30 ನಿಮಿಷಗಳ ಕಾಲ ಫ್ರೀಜ್ ಮಾಡಿ. ಇದನ್ನು ತುಟಿಗೆ ಹಚ್ಚಿದರೆ ತುಟಿಗಳು ಮೃದುವಾಗುತ್ತವೆ.