Publish Date: Tue, 11 Feb 2020 (06:16 IST)
Updated Date: Tue, 11 Feb 2020 (06:17 IST)
ಬೆಂಗಳೂರು : ಮುಖದ ಮೇಲಿರುವ ಕಪ್ಪು ಕಲೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಅದನ್ನು ಹೋಗಲಾಡಿಸಲು ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿ.
ಉಪ್ಪು ಮತ್ತು ನಿಂಬೆ ರಸ ಎರಡು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವುದು ಮಾತ್ರವಲ್ಲ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಕಪ್ಪು ಕಲೆಗಳನ್ನು ತೆಗೆಯಲು ಸಹಕಾರಿಯಾಗಿದೆ.
1 ಚಮಚ ಉಪ್ಪು, ಸ್ವಲ್ಪ ನಿಂಬೆರಸ, 1 ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಬಳಿಕ 15 ನಿಮಿಷ ಬಿಟ್ಟು ವಾಶ್ ಮಾಡಿ, ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ಕಪ್ಪು ಕಲೆ ನಿವಾರಣೆಯಾಗುತ್ತದೆ.