ಬೆಂಗಳೂರು : ನೆಲ್ಲಿ ಕಾಯಿ ಜ್ಯೂಸ್ ಆರೋಗ್ಯಕ್ಕೆ ತುಂಬಾನೇ ಸಹಕಾರಿಯಾಗಿದೆ. ಮನೆಯಲ್ಲೇ ಈ ಜ್ಯೂಸ್ ತಯಾರಿಸಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.
ನೆಲ್ಲಿಕಾಯಿ ಜ್ಯೂಸ್ನಲ್ಲಿ ಸ್ವಲ್ಪ ಮಟ್ಟಿಗೆ ಮೆಂತ್ಯ ಹಾಕಿ ಕುಡಿಯೋದ್ರಿಂದ ಡಯಾಬಿಟೀಸ್ ಅಥವಾ ಮಧುಮೇಹವನ್ನುನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.ಜ್ಯೂಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿನ ಸಕ್ಕರೆ ಮತ್ಟವನ್ನು ಕಡಿಮೆಮಾಡುತ್ತದೆ. ಹಾಗಾಗಿ ಮಧುಮೇಹ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
ಈ ಜ್ಯೂಸ್ ನಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುವುದರಿಂದ ಅದು ಬಾಯಿಹುಣ್ಣು, ಹೊಟ್ಟೆ ಹುಣ್ಣು, ಉರಿಯೂತದಂತಹ ಸಮಸ್ಯೆಯನ್ನು ನಿವಾರಿಸುತ್ತದೆ.ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಮೂಲಕ ಬಿಸಿಲಿನ ಕಾರಣ ಉದುರಬಹುದಾಗಿದ್ದ ಕೂದಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಕೂದಲ ಬುಡವನ್ನು ದೃಢಗೊಳಿಸಲು ನೆರವಾಗುತ್ತದೆ.
ಅಲ್ಲದೇ ಈ ಪಾನೀಯದಲ್ಲಿರುವ ವಿಟಮಿನ್ ಮತ್ತು ಆಟಿ ಆಕ್ಸಿಡೆಂಟ್ ಹೃದಯದ ಸ್ನಾಯುಗಳನ್ನು ಬಲಿಷ್ಠಗೊಳಿಸಿ ಹಲವಾರು ರೀತಿಯ ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ದೂರಮಾಡುತ್ತದೆ.
ಮೂತ್ರನಾಳದಲ್ಲಿ ಕಲ್ಲು ಬೆಳೆಯುವುದನ್ನು ತಡೆಯುತ್ತದೆ. ಮೂತ್ರನಾಳ ಹಾಗೂ ಯಕೃತ್ ನಲ್ಲಿ ಇರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂತ್ರನಾಳದಲ್ಲಿ ಕಲ್ಲುಬೆಳೆಯುವದನ್ನು ತಪ್ಪಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ