ಬೆಂಗಳೂರು : ಹಲಸಿನ ಹಣ್ಣು ತಿನ್ನಲು ಬಹಳ ಸಿಹಿ. ಇದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಅಷ್ಟೇ ಅಲ್ಲದೇ ಇದರಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.
*ಮುಖದಲ್ಲಿ ಸುಕ್ಕುಗಳು ಕಂಡುಬಂದರೆ ಹಲಸಿನ ಬೀಜದ ಪುಡಿ ಮತ್ತು ಹಾಲನ್ನು ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷದ ಬಳಿಕ ಮುಖವನ್ನು ತಣ್ಣೀರಿನಿಂದ ವಾಶ್ ಮಾಡಿ.
*ಹಲಸಿನ ಬೀಜವನ್ನು ರಾತ್ರಿ ಹಾಲು ಮತ್ತು ಜೇನಿನೊಂದಿಗೆ ನೆನೆಸಿ ಮರುದಿನ ಇದನ್ನು ನುಣ್ಣಗೆ ರುಬ್ಬಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ತ್ವಚೆಯ ಅಂದ ಹೆಚ್ಚುತ್ತದೆ.