Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಯಾನ್ಸರ್ ರೋಗಕ್ಕೆ ರಾಮಬಾಣ ಈ ಅದ್ಭುತ ಜ್ಯೂಸ್, ತಪ್ಪದೇ ಓದಿ

ಕ್ಯಾನ್ಸರ್ ರೋಗಕ್ಕೆ ರಾಮಬಾಣ ಈ ಅದ್ಭುತ ಜ್ಯೂಸ್, ತಪ್ಪದೇ ಓದಿ
, ಶನಿವಾರ, 15 ಅಕ್ಟೋಬರ್ 2016 (13:23 IST)
ಬೀಟರೂಟ್, ಕ್ಯಾರೆಟ್ ಮತ್ತು ಸೇಬು ಹಣ್ಣನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ. ಜ್ಯೂಸ್ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳಿಂದ ಗುಣಮುಕ್ತರಾಗಬಹುದಾಗಿದೆ.

 
ನಿಮಗೆ ಬೇಕಾಗಿರುವುದು...
 
ಒಂದು ಬೀಟ್‌ ರೂಟ್ 
ಒಂದು ಕ್ಯಾರೆಟ್
ಒಂದು ಸೇಬು
 
ಬೀಟ್‌ರೂಟ್, ಕ್ಯಾರೆಟ್ ಮತ್ತು ಸೇಬು ಹಣ್ಣಿನ ಮೇಲಿನ ಸೊಪ್ಪೆಯನ್ನು ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಿಕ್ಸರ್‌ನಲ್ಲಿ ಹಾಕಿ ಜ್ಯೂಸ್ ತಯಾರಿಸಿ. ಜ್ಯೂಸ್‌ ಮತ್ತಷ್ಟು ಟೇಸ್ಟಿಯಾಗಲು ಲಿಂಬೆಹಣ್ಣನ್ನು ಬೆರಸಬೇಕು.
 
ಈ ಅದ್ಭುತ ಜ್ಯೂಸ್‌ನಿಂದ ಕೆಳಗೆ ತೋರಿಸಿದ ರೋಗಗಳಿಗೆ ರಾಮಬಾಣವಾಗಿರುತ್ತದೆ.
 
1.  ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುತ್ತದೆ.
 
2. ಕರಳು, ಕಿಡ್ನಿ, ಪ್ಯಾಂಕ್ರಿಸ್ ರೋಗವನ್ನು ತಡೆಯುವುದಲ್ಲದೇ ಅಲ್ಸರ್ ಕೂಡಾ ಗುಣಪಡಿಸುತ್ತದೆ.
 
3. ಗಂಟಲು ನೋವು, ಹೃದಯಾಘಾತ ಮತ್ತು ಅತಿ ರಕ್ತದೊತ್ತಡವನ್ನು ತಡೆಯುತ್ತದೆ.
 
4. ಆಹಾರವನ್ನು ಬೇಗ ಕರಗಿಸುತ್ತದೆ.
 
5. ಕೆಂಪು ಮತ್ತು ದಣಿದ ಕಣ್ಣುಗಳು ಅಥವಾ ಕಣ್ಣಿನ ಶುಷ್ಕತೆ ನಿವಾರಣೆ
 
6.  ಮಾಂಸಖಂಡ ನೋವು ಸ್ನಾಯ ಸೆಳೆತವನ್ನು ದೂರು ಮಾಡುತ್ತದೆ.
 
7.  ಮುಖದ ಚರ್ಮವನ್ನು ತಾಜಾಗೊಳಿಸುತ್ತದೆ.
 
8. ಮೊಡವೆಗಳನ್ನು ನಿರ್ಮೂಲನೆಗೊಳಿಸುತ್ತದೆ.
 
9. ಗಂಟಲು ನೋವು ಮತ್ತು ಬಾಯಿಯ ದುರ್ಗಂಧವನ್ನು ನಿವಾರಿಸುತ್ತದೆ.
 
10. ಮಾಸಿಕ ಮುಟ್ಟಿನ ತೊಂದರೆ ನಿವಾರಿಸುತ್ತದೆ. 
 
11. ಜ್ವರ ಏರುವಿಕೆ ನಿಯಂತ್ರಿಸುತ್ತದೆ.
 
ಇಂತಹ ಅದ್ಭುತ ಜ್ಯೂಸ್ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇದು ಅತ್ಯಂತ ಪೌಷ್ಟಿಕ ಮತ್ತು ಸುಲಭವಾಗಿ ಹೀರಿಕೊಳ್ಳುತ್ತದೆ! ನೀವು ತೂಕವನ್ನು ಇಳಿಸಬೇಕಾದಲ್ಲಿ ಜ್ಯೂಸ್ ಸೇವನೆ ತುಂಬಾ ಪರಿಣಾಮಕಾರಿ.
 
ಕೇವಲ ಎರಡು ವಾರಗಳಲ್ಲಿ ನಿಮ್ಮ ಪಚನ ಕ್ರಿಯೆಯಲ್ಲಿ ಸುಧಾರಣೆ ಕಂಡು ಬರುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಜ್ಯೂಸ್ ತಯಾರಿಸಿದೆ ಕೂಡಲೇ ಸೇವಿಸುವುದು ಉತ್ತಮ.
 
ಯಾವಾಗ ಈ ಜ್ಯೂಸ್ ಕುಡಿಯಬೇಕು?
 
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಸೇವನೆ ಮಾಡಬೇಕು. ಒಂದು ಗಂಟೆಯ ನಂತರ ಲಘು ಉಪಹಾರ ಸೇವಿಸಬಹುದು. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಜ್ಯೂಸ್ ಸೇವಿಸಬೇಕು. ಬೆಳಿಗ್ಗೆ ಒಂದು ಬಾರಿ ಸಂಜೆ 5 ಗಂಟೆಯೊಳಗೆ ಒಂದು ಬಾರಿ ಸೇವಿಸಬೇಕು.
 
ಕೇವಲ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಕ್ಯಾನ್ಸರ್‌ನಂತಹ ರೋಗ ಸೇರಿದಂತೆ ಹಲವು ರೋಗಗಳಿಂದ ಗುಣಮುಕ್ತರಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಬೀಟರೂಟ್, ಕ್ಯಾರೆಟ್ ಮತ್ತು ಸೇಬು ಹಣ್ಣನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಮಾಡಿ ದೀರ್ಘಾಯುಷಿಗಳಾಗಲು ಈ ಲೇಖನ ಓದಿ