ದೀರ್ಘಾಯುಷ್ಯ ಪಡೆಯಲು ಕೆಲವರು ಏನೆಲ್ಲ ಪ್ರಯತ್ನ ಮಾಡುತ್ತಾರೆ, ಆದರೆ ನಿಜವಾದ ಮೂಲಮಂತ್ರವೆಂದರೆ ಸೆಕ್ಸ್. ಈ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ, ಇದನ್ನು ತಿಳಿದುಕೊಳ್ಳಲು ಲೇಖನ ಓದಿ.
ಸೆಕ್ಸ್ ನಿಂದ ಆಯುಷ್ಯ ಹೆಚ್ಚಾಗುತ್ತದೆ ಎಂದು ಅಮೆರಿಕಾದ ಎಂಟಿ ಎಜಿಂಗ್ ನ ವಿಜ್ಞಾನಿ ಡಾ. ಎರಿಕ್ ಬ್ರಾಬರ್ಮನ್ ಹೇಳಿದ್ದಾರೆ. ಸೆಕ್ಸ್ ಮಾಡುವುದರಿಂದ ಮನುಷ್ಯರ ಹಾರ್ಮೋನ್ ವೃದ್ದಿಗೊಳ್ಳುತ್ತವೆ. ಇದರಿಂದ ಜನರ ಮೆಟಾಬೋಲಿಜ್ಮ್ ಸರಿಯಾಗಿ ಕೆಲಸ ಮಾಡುತ್ತದೆ, ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ರೋಗನೀರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ವ್ಯಕ್ತಿ ಸ್ವಾಸ್ಥನಾಗುತ್ತಾನೆ ಮತ್ತು ದೀರ್ಘಾಯುಷಿ ಆಗುತ್ತಾನೆ.
ಒಂದು ವೇಳೆ, ಮನುಷ್ಯ ಸೆಕ್ಸ್ ನಲ್ಲಿ ಖುಷಿ ಅನುಭವಿಸದಿದ್ದರೆ ಇದರ ಪರಿಣಾಮ ಅವನ ವೈಯಕ್ತಿಕ ಜೀವನದ ಮೇಲು ಆಗುತ್ತದೆ ಎಂದು ಡಾ. ಬ್ರವರಮನ್ ಅಭಿಪ್ರಾಯಪಟ್ಟಿದ್ದಾರೆ. ಸೆಕ್ಸ್ ಇರದಿದ್ದರೆ ಮನುಷ್ಯ ನಿಶಕ್ತನಾಗುತ್ತಾನೆ ಮತ್ತು ಮನುಷ್ಯ ಒಳಗೊಳಗೆ ಕೊರಗುತ್ತ ಇರುತ್ತಾನೆ, ಹೀಗಾಗಿ ಆತ ನಿಶಕ್ತನಾಗುತ್ತಾನೆ. ಸೆಕ್ಸ್ ಸುಖ ಸಿಗದ ಸಲುವಾಗಿ ವಿಚ್ಚೇದನ ಪ್ರಕರಣಗಳು ಕೂಡ ಹೆಚ್ಚು ನಡೆಯುತ್ತಿವೆ.
ಸೆಕ್ಸ್ ಜೀವನದ ಸದ್ಗುಣದ ಕುರಿತು ಬೆಲ್ಪೆಸ್ಟ್ ಸ್ಥಿತ್ ಕ್ವಿನ್ ಯುನಿವರ್ಸಿಟಿ ವತಿಯಿಂದ ನಡೆಸಲಾದ ಸಂಶೋಧನೆ ಪ್ರಕಾರ , ಮನುಷ್ಯ ಸೆಕ್ಸ್ ಜೀವನದಲ್ಲಿ ಸಂತುಷ್ಟನಾಗಿ ಇದ್ದರೆ ಆತನಿಗೆ ಹೃದಯಘಾತವಾಗುವ ಸಾಧ್ಯತೆ ಬಹಳ ಕಡಿಮೆಯಂತೆ.
ಈ ಸಂಶೋಧನೆ ಪ್ರಕಾರ ಸೋಂಕಿತ ಜೀವಕೋಶಗಳ ಪರಾಕಾಷ್ಠೆಯನ್ನು ಶೇ.20 ಕ್ಕಿಂತ ಅಧಿಕವಾಗಿ ತಡೆಯುತ್ತವೆ. ಇನ್ನೊಂದು ಸಂಶೋಧನೆ ಪ್ರಕಾರ ಸೆಕ್ಸ್ ಕೇವಲ ಯುವಕರಿಗ ಅಷ್ಟೆ ಅಲ್ಲ , ಮಧ್ಯವಯಸ್ಕರಿಗು ಕೂಡ ಉಪಯೋಗವಿದೆ. ಹಾಗಾದರೆ ನೈತಿಕವಾಗಿ ಸುಂದರ ಜೀವನದಲ್ಲಿ ಸೆಕ್ಸ್ ಅನ್ನು ಎಂಜಾಯ್ ಮಾಡಿ, ದೀರ್ಘಾಯುಷಿಗಳಾಗಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ