Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ಜೂರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ

ಕರ್ಜೂರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ
ಬೆಂಗಳೂರು , ಶುಕ್ರವಾರ, 10 ಸೆಪ್ಟಂಬರ್ 2021 (09:40 IST)
ಅತೀಯಾದ ಪೌಷ್ಟಿಕ ಅಂಶವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಈ ಕರ್ಜೂರ ಸೇವನೆ ಹಲವು ರೋಗಗಳಿಗೆ ರಾಮಬಾಣವು ಹೌದು. ಚಳಿಗಾಲದಲ್ಲಿ ಶೀತ, ಕೆಮ್ಮು, ಗಂಟಲು ನೋವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣ. ಈ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸುವ ಪದಾರ್ಥಗಳ ಸೇವನೆ ಮಾಡಿದರೆ ಒಳ್ಳೆಯದು. ಕರ್ಜೂರ ಇದಕ್ಕೆ ಹೆಚ್ಚು ಸೂಕ್ತವಾದ ಒಣ ಹಣ್ಣಾಗಿದೆ.

ಈ ಹಣ್ಣು ದೇಹವನ್ನು ಉಷ್ಣತೆಯಿಂದಿರಿಸಿ ಆರೋಗ್ಯಕರವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕರ್ಜೂರದ ರುಚಿ ಕಂಡವರು ತಿನ್ನೋದನ್ನು ಬಿಡೋದಿಲ್ಲ. ಈ ಕರ್ಜೂರದಲ್ಲಿ ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆಯಸಿಡ್, ರಂಜಕ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಮಧುಮೇಹಿಗಳಿಗೆ ಇದು ಒಳ್ಳೆಯದು.
ದೇಹದಲ್ಲಿ ರಕ್ತ ಕಡಿಮೆಯಿರುವವರು ಪ್ರತಿದಿನ ಕರ್ಜೂರವನ್ನು ತಿನ್ನುವುದು ಬಹಳ ಒಳ್ಳೆಯದು. ಇದ್ರಲ್ಲಿರುವ ಕಬ್ಬಿಣಾಂಶ ರಕ್ತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕರ್ಜೂರದಲ್ಲಿರುವ ವಿಟಮಿನ್ ಬಿ ಕೂದಲಿಗೆ ಒಳ್ಳೆಯದು. ನಿಯಮಿತವಾಗಿ ಕರ್ಜೂರ ಸೇವನೆ ಮಾಡುವುದ್ರಿಂದ ಕೂದಲುದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
webdunia

ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲೂಕೋಸ್ ಸಾಕಷ್ಟಿರುತ್ತದೆ. ಹಾಗಾಗಿ ಕರ್ಜೂರ ತಿಂದ ತಕ್ಷಣ ಶಕ್ತಿ ಉತ್ಪತ್ತಿಯಾಗುತ್ತದೆ. ಎರಡರಿಂದ ನಾಲ್ಕು ಕರ್ಜೂರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ ಸಿಗುತ್ತದೆ. ಕಡಿಮೆ ತೂಕವುಳ್ಳವರು ಅವಶ್ಯವಾಗಿ ಕರ್ಜೂರ ತಿನ್ನಬೇಕು. ಇದ್ರಲ್ಲಿರುವ ವಿಟಮಿನ್, ಸಕ್ಕರೆ ಅಂಶ, ಜೀವಸತ್ವಗಳು ತೂಕ ಏರಲು ಸಹಾಯ ಮಾಡುತ್ತವೆ. ಕರ್ಜೂರ ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ತಾಮ್ರವನ್ನು ಒಳಗೊಂಡಿರುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ.
ಮಲಬದ್ಧತೆ ಸಮಸ್ಯೆಯುಳ್ಳವರು ಅವಶ್ಯವಾಗಿ ಕರ್ಜೂರ ಸೇವನೆ ಮಾಡಬೇಕು. ರಾತ್ರಿ ನಾಲ್ಕು ಕರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವನೆ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಕೆಗೆ 10 ಮಾರ್ಗಗಳು ಇಲ್ಲಿವೆ..