Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂತಸದ ಜೀವನಕ್ಕೆ ಸರಳ ಸೂತ್ರಗಳು

ಸಂತಸದ ಜೀವನಕ್ಕೆ ಸರಳ ಸೂತ್ರಗಳು
ಬೆಂಗಳೂರು , ಮಂಗಳವಾರ, 19 ಜೂನ್ 2018 (14:01 IST)
ಪ್ರತಿಯೊಬ್ಬರೂ ಆರೋಗ್ಯವಾಗಿ ಸಂತಸದಿಂದ ಬದುಕಬೇಕು ಎಂದು ಬಯಸಿರುತ್ತಾರೆ. ಆದರೆ ಹೇಗೆ ಎಂದು ಯೋಚಿಸಿಯೂ ಇರುವುದಿಲ್ಲ. ತಮ್ಮದೇ ಆದ ಜೀವನ ಶೈಲಿಗೆ, ಅಭ್ಯಾಸಗಳಿಗೆ ಒಗ್ಗಿ ಹೋಗಿರುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಆದರೆ ಕೆಲವು ಸರಳ ಸೂತ್ರಗಳನ್ನು ಅನುಸರಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ಯಾವ್ಯಾವುದು ಅಂತ ಕೇಳ್ತಾ ಇದೀರಾ? ಹೇಳ್ತೀವಿ ಕೇಳಿ......
* ವ್ಯಾಯಾಮ: ನಿತ್ಯ ಪ್ರಾಣಾಯಾಮ, ಯೋಗಾಸನ, ಸೂರ್ಯ ನಮಸ್ಕಾರ, ವಾಕಿಂಗ್‌ನಂತಹ ವ್ಯಾಯಾಮದ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಉತ್ತಮ ಚೈತನ್ಯ ದೊರೆಯುವುದಲ್ಲದೇ, ಮನಸ್ಸಿನ ಪ್ರಫುಲ್ಲತೆ ಹೆಚ್ಚುತ್ತದೆ.
 
* ಹಸನ್ಮುಖಿಗಳಾಗಿರಿ: ಮಕ್ಕಳಂತೆ ಸದಾ ಹಸನ್ಮುಖಿಗಳಾಗಿರಿ. ನೀವು ನಗುತ್ತಿದ್ದರೆ ಅಕ್ಕಪಕ್ಕದವರೂ ನಗುತ್ತಿರಬಹುದು. ಹಾಸ್ಯಗಳನ್ನು ಹೇಳುತ್ತಾ, ತಾವೂ ನಕ್ಕು ಮತ್ತೊಬ್ಬರನ್ನೂ ನಗಿಸುವ ಗುಣವನ್ನು ಮೈಗೂಡಿಸಿಕೊಳ್ಳಿ.
 
* ಒಳ್ಳೆಯ ಹವ್ಯಾಸಗಳಿರಲಿ: ಪುಸ್ತಕ ಓದುವುದು, ಸಂಗೀತ ಕೇಳುವುದು, ವಾದ್ಯಗಳನ್ನು ನುಡಿಸುವುದು, ಯಾವುದೇ ಇರಲಿ ನಿಮಗೆ ಖುಷಿ ಕೊಡುವ ಹವ್ಯಾಸಗಳನ್ನು ಬೆಳೆಸಿಕೊಂಡರೆ ಸಂತೋಷವು ನಿಮ್ಮ ಬೆನ್ನು ಹತ್ತುತ್ತದೆ.
 
* ಸ್ನೇಹಿತರನ್ನು ಸಂಪಾದಿಸಿ: ಸ್ನೇಹಿತರ ಜೊತೆ ಪ್ರವಾಸೀ ಸ್ಥಳಗಳಿಗೆ ಹೋಗಿ ಬನ್ನಿ. ಅವರ ಜನ್ಮದಿನದಂದು, ಹಬ್ಬ ಹರಿದಿನಗಳಂದು ಶುಭ ಹಾರೈಸಿ, ಸತ್ಕರಿಸಿ. ಆಗ ಸ್ನೇಹಿತರ ಜೊತೆ ಸಂತೋಷವನ್ನು ಅನುಭವಿಸಿ.
 
* ಶಾಪಿಂಗ್ ಮಾಡಿ: ರಜೆ ದಿನಗಳಲ್ಲಿ ನಿಮ್ಮ ಮನೆಯವರ ಜೊತೆ ಶಾಪಿಂಗ್‌ಗೆ ಹೋಗಿ.. ಅಲ್ಲಿ ನಿಮಗೆ ಇಷ್ಟವಾಗುವ ವಸ್ತುಗಳನ್ನು ಕೊಳ್ಳುವುದರಿಂದ ನಿಮ್ಮ ಮನದ ಸಂತಸವು ಹೆಚ್ಚುತ್ತದೆ.
 
* ಸಹಾಯ ಮಾಡಿ: ಮನೆಗೆ ತರಕಾರಿ ತಂದು ಕೊಡುವುದು, ಮನೆಯ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಮನೆಯವರಿಗೆ ಸಹಾಯ ಮಾಡಿ. ಇದರಿಂದ ನಿಮ್ಮ ಮನೆಯವರಿಗೂ ಸಂತೋಷವಾಗುತ್ತದೆ. ಅಲ್ಲದೇ ನಿಮ್ಮ ಬಗ್ಗೆ ಪ್ರೀತಿಯೂ ಹೆಚ್ಚುತ್ತದೆ.
 
* ಶುದ್ಧವಾಗಿರಿ: ನಿತ್ಯ ತಣ್ಣೀರಿನಲ್ಲಿ ಸಂತೋಷದಿಂದ ಸ್ನಾನ ಮಾಡುವುದರಿಂದ ಮನಸ್ಸಿಗೂ, ದೇಹಕ್ಕೂ ಸಂತಸ ದೊರೆಯುತ್ತದೆ. 
 
* ಪ್ರೀತಿಯಿರಲಿ: ಎಲ್ಲರನ್ನೂ ಪ್ರೀತಿಯಿಂದ ಕಾಣುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಗ ಜನ ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ. ಅಗ ನಿಮ್ಮ ಅತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ನೀವು ಸಂತಸದಿಂದ ಇರಲು ಸಾಧ್ಯವಾಗುತ್ತದೆ.
 
* ನಿಶ್ಚಿಂತೆಯ ನಿದ್ದೆ ಮಾಡಿ: ನಿದ್ದೆ ಮನುಷ್ಯನನ್ನು ಆರೋಗ್ಯವಂತರನ್ನಾಗಿಡುತ್ತದೆ. ನಿತ್ಯ 8 ರಿಂದ 10 ಗಂಟೆಯ ನಿದ್ದೆಯಿಂದ ಆರೋಗ್ಯ ವೃದ್ಧಿಸುವುದಲ್ಲದೇ, ಮನಸ್ಸಿನ ಸಂತಸವೂ ಇಮ್ಮಡಿಯಾಗುತ್ತದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಬೀಟ್‌ರೂಟ್ ಬಳಸಿ ಆರೋಗ್ಯ ಹೆಚ್ಚಿಸಿ