ಸಮಸ್ಯೆ: ನಾನು 25 ವರ್ಷದ ಯುವಕ. ಮದುವೆಯಾಗಿ ಐದು ತಿಂಗಳಾಗಿದೆ. ನನಗೆ ಶೀಘ್ರ ಸ್ಖಲನದ ತೊಂದರೆ ಇದೆ. ಗುಪ್ತಾಂಗ ಬೇಗನೆ ಗಡುಸಾಗುತ್ತದೆ. ಆದರೆ ನನ್ನ ಪತ್ನಿಯ ಜೊತೆ ಸಂಭೋಗಕ್ಕೆ ಮುಂದಾಗುವಾಗ ಹಾಗೇ ವೀರ್ಯ ಚೆಲ್ಲಿಹೋಗುತ್ತದೆ. ಮದುವೆಯ ಮುಂಚೆ ಹಸ್ತಮೈಥುನ ಮಾಡುತ್ತಿದ್ದೆ. ಅದರಿಂದ ಏನಾದರೂ ತೊಂದರೆ ಇದೆಯಾ? ದಯವಿಟ್ಟು ಶೀಘ್ರಸ್ಖಲನಕ್ಕೆ ಸೂಕ್ತ ಪರಿಹಾರ ನೀಡಿ, ದೀರ್ಘ ಸಂಭೋಗ ಮಾಡುವ ಉಪಾಯ ಹೇಳಿಕೊಡಿ.
ಸಲಹೆ: ಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉದ್ವೇಗದಿಂದ ವೀರ್ಯ ಸ್ಖಲಿಸಿಬಿಡುತ್ತೀರಿ. ಆರಾಮವಾಗಿ, ಸಾವಕಾಶವಾಗಿ ಸರಸ ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆ. ವಿವಾಹಪೂರ್ವದಲ್ಲಿ ಹಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.
ಶಿಶ್ನವನ್ನು ತುಂಬಾ ಹೊತ್ತು ನಿಮಿರುವಂತೆ ಮಾಡಲು ಶಿಶ್ನ ಮಣಿ ಮತ್ತು ಶಿಶ್ನಕಾಂಡವನ್ನು ಸೆರುವೆಡೆ ಹೆಬ್ಬೆರಳನ್ನು ಹಿಂಬದಿಯಲ್ಲೂ ಮತ್ತು ಮೂರನೆಯ ಬೆರಳುಗಳನ್ನು ಮುಂಬದಿಯಲ್ಲೂ ಹಿಡಿಯಬೇಕು. ಹಿಂದು ಮುಂದು ಅಲ್ಲಾಡಿಸಿ ಶಿಶ್ನವನ್ನು ಉದ್ರೇಕಿಸಿ ನಿಮಿರಿದ ಶಿಶ್ನವನ್ನು ಸಣ್ಣದು ಮಾಡುವುದೂ ಸುಲಭ. ಪುನಃ ಹಿಂದು ಮುಂದು ಮಾಡುವುದರಿಂದ ಶಿಶ್ನವನ್ನು ಮತ್ತೆ ನಿಮಿರಿಸಬಹುದು. ಆದರೆ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಒತ್ತು ಕೊಡಬಾರದು. ಇದನ್ನು ನೀವು ಮಾಡುವುದಕ್ಕಿಂತಲೂ ನಿಮ್ಮ ಪತ್ನಿಯ ಕೈಯ್ಯಲ್ಲಿ ಮಾಡಿಸಿದರೆ ಹೆಚ್ಚು ಪರಿಣಾಮ ಉಂಟಾಗುತ್ತದೆ.
ಶೀಘ್ರ ಸ್ಖಲನದ ತೊಂದರೆಯಿದ್ದರೆ ನೀವು ಸಮಾಧಾನದಿಂದ ಮುಖ ಮೇಲೆ ಮಾಡಿ ಮಲಗಬೇಕು. ನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದು. ನಿಮಗೆ ಸ್ಖಲನದ ಭಾವನೆ ಬಂದ ಒಡನೆಯೇ ನಿಮ್ಮ ಪತ್ನಿಗೆ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಬೇಕು. ಆಗ ಸ್ಖಲನವಾಗುವುದಿಲ್ಲ. ಇದರಿಂದ ಪುರುಷನಿಗೆ ಶಿಶ್ನದ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಒತ್ತು ಕೊಡುವುದನ್ನು ಶಿಶ್ನಕಾಂಡದ ಪೀಠದ ಬಳಿಯೂ ಮಾಡಬಹುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಆದರೆ ಇದು ಅತಿ ಸುಲಭದ ಹಾಗೂ ವೈಜ್ಞಾನಿಕ ವಿಧಾನವಾಗಿದೆ. ಇದಕ್ಕೆ ಹಿಂಡುವಿಕೆ ಚಿಕಿತ್ಸೆ ಎನ್ನುತ್ತಾರೆ.