Webdunia - Bharat's app for daily news and videos

Install App

ವರ್ಕ್ ಫ್ರಂ ಹೋಮ್ ಸಮಯದಲ್ಲಿ ದೇಹದ ಫಿಟ್ನೆಸ್ಗೆ ಪಿಲೇಟ್ಸ್ ವರ್ಕ್ಔಟ್ ಬೆಸ್ಟ್ !

Webdunia
ಸೋಮವಾರ, 19 ಜುಲೈ 2021 (10:58 IST)
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಡೆಗೆ ಪ್ರತಿಯೊಬ್ಬರ ಗಮನ ಹೋಗುತ್ತಿದೆ ಎಂದರೆ ತಪ್ಪಾಗಲಾರದು. ಕೋವಿಡ್ ಸಾಂಕ್ರಾಮಿಕಗಳ ನಡುವೆ ಆರೋಗ್ಯವಾಗಿರಬೇಕೆಂಬ ಆಸೆ ಈಗ ಪ್ರತಿಯೊಬ್ಬರನ್ನು ಕಾಡುವ ಬಯಕೆಯಾಗಿದೆ. ವರ್ಕ್ ಫ್ರಮ್ ಹೋಮ್ ಜಂಜಾಟದಿಂದ ಮೈ ಬಂದಿದೆ ಎಂಬುದು ಹೆಚ್ಚಿನ ಸಾಫ್ಟ್ವೇರ್ ಉದ್ಯೋಗಿಗಳು, ಹೆಚ್ಚು ಸಮಯ ಕುಳಿತುಕೊಂಡೇ ಕೆಲಸ ಮಾಡುವ ಉದ್ಯೋಗಿಗಳ ಅಳಲಾಗಿದೆ. ಹಾಗಾದರೆ ಫಿಟ್ ಆಗಿ ಇರಲು ಮಾಡಬೇಕಾದ ಕಸರತ್ತುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.


ಫಿಟ್ನೆಸ್ ಎಕ್ಸ್ಪರ್ಟ್ ಯಾಸ್ಮಿನ್ ಕರಾಚಿವಾಲ ಹೇಳುವಂತೆ ಎಚ್ಐಐಡಿ ಹಾಗೂ ಪಿಲೇಟ್ಸ್ ಅಭ್ಯಾಸ ಮಾಡುವುದು ದೇಹದ ತೂಕವನ್ನು ಬೇಗನೇ ಇಳಿಸಿ ದೇಹವನ್ನು ಫಿಟ್ ಮಾಡುತ್ತದೆ ಎಂದಾಗಿದೆ. ಎಚ್ಐಐಟಿ ಎಂಬುದು ಹೈ ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್ ಎಂದಾಗಿದೆ. ಈ ವ್ಯಾಯಾಮಗಳನ್ನು ಮಾಡಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ ಅಂತೆಯೇ ನಡು ನಡುವೆ ಚೇತರಿಕೆಯನ್ನು ನೀಡುವುದರಿಂದ ಆಯಾಸವಾದರೂ ಕಸರತ್ತು ಮಾಡುವ ತಾಕತ್ತಿರುತ್ತದೆ ಎಂದಾಗಿದೆ. ಇನ್ನು ಪಿಲೇಟ್ಸ್ ವ್ಯಾಯಾಮದ ವಿಭಿನ್ನ ರೂಪವಾಗಿದ್ದು ಇದನ್ನು ಎಲ್ಲಿ ಬೇಕಾದರೂ ಮಾಡಬಹುದಾಗಿದೆ. ಇದು ಕಡಿಮೆ ಇಂಟೆನ್ಸಿಟಿ ವ್ಯಾಯಾಮವಾಗಿದ್ದು ನಿಮ್ಮ ದೇಹದ ಭಂಗಿಗಳನ್ನು ಪರ್ಫೆಕ್ಟ್ ಆಗಿ ರೂಪಿಸುವಲ್ಲಿ ಸಹಕಾರಿಯಾಗಿದೆ. ಅದೇ ರೀತಿ ಇದು ಸ್ನಾಯುಗಳನ್ನು ಬಲಪಡಿಸುತ್ತದೆ.

ನಿಮ್ಮ ವರ್ಕೌಔಟ್ ಶಕ್ತಿಯನ್ನು ಇನ್ನಷ್ಟು ದೃಢಪಡಿಸಿಕೊಳ್ಳಬೇಕು ಎಂದಾದಲ್ಲಿ ಈ ಎಚ್ಐಐಟಿ ಹಾಗೂ ಪಿಲೇಟ್ಸ್ ವ್ಯಾಯಾಮಗಳನ್ನು ನೀವು ಅಭ್ಯಸಿಸಲೇಬೇಕು. ಐದು ಬಗೆಯ ವ್ಯಾಯಾಮ ರೂಪಗಳನ್ನು ಯಾಸ್ಮಿನ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು ಪ್ರತಿಯೊಂದನ್ನು ಮೂರು ಬಾರಿ 45 ಸೆಕೆಂಡ್ಗಳಂತೆ ಮಾಡಲು ತಿಳಿಸಿದ್ದಾರೆ. ವ್ಯಾಯಾಮಗಳ ನಡುವೆ 15 ಸೆಕೆಂಡ್ಗಳ ವಿಶ್ರಾಂತಿಯನ್ನು ತೆಗೆದುಕೊಳ್ಳಿ ಎಂದವರು ಸೂಚಿಸಿದ್ದಾರೆ. ಕಾಲು ಹಾಗೂ ಕೈಗಳನ್ನು ಬಳಸಿಕೊಂಡು ತೆವಳಿಕೊಂಡು ಮುಂದೆ ಹೋಗಿ ಎರಡೂ ಕೈಗಳನ್ನು ಮೇಲೆತ್ತುವುದು, ನಂತರ ತೊಡೆಯ ಭಾಗವನ್ನು ಎರಡೂ ಬದಿಗಳಲ್ಲಿ ಮೇಲೆತ್ತುವುದು, ತಲೆಯನ್ನು ಎತ್ತರಿಸಿ ಕಾಲುಗಳೆರಡನ್ನೂ ಮುಂದಕ್ಕೆ ಚಾಚುವುದು, ಕಾಲುಗಳೆರಡನ್ನೂ ಹಿಂದಕ್ಕೆ ಪೃಷ್ಠವನ್ನು ಎತ್ತಿ ಬಗ್ಗಿಸುವುದು, ಜಂಪಿಂಗ್ ವ್ಯಾಯಾಮ ಹೀಗೆ ಎರಡೂ ರೀತಿಯ ವ್ಯಾಯಾಮವನ್ನು ಮಿಶ್ರ ಮಾಡಿ ಇಫೆಕ್ಟೀವ್ ವ್ಯಾಯಾಮವನ್ನು ತಿಳಿಸಿಕೊಟ್ಟಿದ್ದಾರೆ.
ನಿತ್ಯವೂ ವ್ಯಾಯಾಮ ಮಾಡುವುದರಿಂದ ದೇಹವು ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದಾಗಿದೆ. ಫಿಟ್ನೆಸ್ ಅನ್ನು ನಿಮ್ಮ ಜೀವನದಲ್ಲಿ ಒಮ್ಮೆ ಅಳವಡಿಸಿಕೊಂಡರೆ ಆಯಿತು ನೀವು ಬೇಡ ಎಂದರೂ ಅದು ನಿಮ್ಮನ್ನು ಬಿಡುವುದಿಲ್ಲ. ಒಂದು ರೀತಿಯ ಅಟ್ಯಾಚ್ಮೆಂಟ್ ನಿಮ್ಮ ದೇಹದೊಂದಿಗೆ ಬೆಳೆದುಬಿಡುತ್ತದೆ ಎಂಬುದು ಯಾಸ್ಮಿನ್ ಮಾತಾಗಿದೆ.

 
ಯಾವುದೇ ವ್ಯಾಯಾಮ ಮಾಡಿ ನಡು ನಡುವೆ ವಿಶ್ರಾಂತಿಯನ್ನು ಪಡೆಯುವುದು ಉತ್ತಮ ಅಭ್ಯಾಸವಾಗಿದೆ. ಇಲ್ಲದಿದ್ದರೆ ಮುಂದಿನ ವ್ಯಾಯಾಮದ ಸಮಯದಲ್ಲಿ ಸುಸ್ತು, ಆಯಾಸ, ತಲೆಸುತ್ತು, ಬಳಲಿಕೆ ನಿಮ್ಮನ್ನು ಕಾಡಬಹುದು. ಇದರಿಂದ ವ್ಯಾಯಾಮ ಮಾಡುವ ಆಸಕ್ತಿಯನ್ನು ನೀವು ಕಳೆದುಕೊಳ್ಳಬಹುದು ಎಂದು ಯಾಸ್ಮಿನ್ ಕರಾಚಿವಾಲಾ ಅವರ ಸಲಹೆಯಾಗಿದೆ. ನೀವು ಯಾವುದೇ ಬಗೆಯ ದೈಹಿಕ ಚಟುವಟಿಕೆಯನ್ನು ಮಾಡುವ ಮೂಲಕ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments