ತೆಂಗಿನಕಾಯಿ ವಿನೆಗರ್ ಅನ್ನು ಹಲವಾರು ಭಕ್ಷ್ಯಗಳಲ್ಲಿ ಪರಿಮಳವನ್ನು ಹೆಚ್ಚಿಸುವ ಸಾಧನವಾಗಿ ಬಳಸಲಾಗುತ್ತದೆ. ತೆಂಗಿನಕಾಯಿ ಫೆನಿ - ದೇಸಿ ಗೋವಾದ ಆಲ್ಕೊಹಾಲ್ಯುಕ್ತ ಪಾನೀಯ ತಯಾರಿಸಲು ಸಹ ಬಳಕೆಯಾಗುತ್ತಿದೆ. ಇದು ಆ್ಯಪಲ್ ಸೈಡರ್ ವಿನೆಗರ್ಗಿಂತ ರುಚಿಯಾಗಿರುತ್ತದೆ.
ತೆಂಗಿನಕಾಯಿ ವಿನೆಗರ್ನಿಂದ ಸಾಂಪ್ರದಾಯಿಕ ಗೋವಾದ ಖಾದ್ಯಗಳಾದ ವಿಂಡಾಲೂ ಮತ್ತು ಸೋರ್ಪೊಟೆಲ್ ತಯಾರಿಸಬಹುದು. ಇದನ್ನು ಮನೆಯಲ್ಲಿಯೂ ತಯಾರಿಸಬಹುದು ಮತ್ತು ಇದನ್ನು ಹಲವು ವಿಧಗಳಲ್ಲಿ ಬಳಸಬಹುದು. ಆದರೆ ನಾವು ವಿನೆಗರ್ ತಯಾರಿಸುವ ಪ್ರಕ್ರಿಯೆಗೆ ಹೋಗುವ ಮೊದಲು, ತೆಂಗಿನಕಾಯಿ ವಿನೆಗರ್ನ ಕೆಲವು ಪ್ರಯೋಜನಗಳನ್ನು ನೋಡೋಣ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ತೆಂಗಿನಕಾಯಿ ವಿನೆಗರ್ ಅಸಿಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಇದನ್ನು ಕಾರ್ಬ್ ಭರಿತ ಆಹಾರ ಸೇವಿಸಿದ ನಂತರ ತೆಗೆದುಕೊಳ್ಳಬೇಕು.
ತೂಕ ಇಳಿಕೆಗೆ ರಾಮಬಾಣ: ತೂಕ ಇಳಿಸುವಿಕೆಯಲ್ಲಿ ಡಯೆಟ್ ಮೊರೆ ಹೋದವರು ತಮ್ಮ ಪಟ್ಟಿಗೆ ಈ ವಿನೆಗರ್ ಅನ್ನು ಸೇರಿಸಿಕೊಳ್ಳಬಹುದು. ಹಸಿವನ್ನು ನಿಗ್ರಹಿಸುತ್ತದೆ ಅಂದರೆ ದೀರ್ಘಕಾಲದವರೆಗೆ ಹಸಿವಾಗದಂತೆ ಮಾಡುತ್ತದೆ. ಇದರಲ್ಲಿರುವ ಆ್ಯಸಿಟಿಕ್ ಆಮ್ಲ ಈ ಎಲ್ಲಾ ಪ್ರಕ್ರಿಯೆಗೆ ಸಹಕಾರ ನೀಡುತ್ತಿದೆ.3. ಜೀರ್ಣಕ್ರಿಯೆಗೆ ಸಹಕಾರಿ
ಇದರಲ್ಲಿ ಪ್ರೋಬಯಾಟಿಕ್ ಅಂಶ ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ: ಇದರಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಳವಾಗಿದೆ. ಇದು ಹೆಚ್ಚಾಗಿ ಖನಿಜಾಂಶವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯಕಾವಗುತ್ತದೆ. ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.
ಮನೆಯಲ್ಲೇ ತೆಂಗಿನಕಾಯಿ ವಿನೆಗರ್ ತಯಾರಿಸುವುದು ಹೇಗೆ?
ತೆಂಗಿನಕಾಯಿ ವಿನೆಗರ್ ಅನ್ನು ತೆಂಗಿನಕಾಯಿ ಅಥವಾ ತೆಂಗಿನ ಚಿಪ್ಪಿನೊಳಗಿನ ನೀರಿನಿಂದ ತಯಾರಿಸಲಾಗುತ್ತದೆ.
1. ಸ್ವಲ್ಪ ತೆಂಗಿನ ನೀರನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಫಿಲ್ಟರ್ ಮಾಡಿ.
2. ನೀರನ್ನು ಬಿಸಿ ಮಾಡಿ ಅದಕ್ಕೆ ಸಕ್ಕರೆ ಸೇರಿಸಿ. ಸಕ್ಕರೆ ಕರಗುವ ತನಕ ಮಿಶ್ರಣವನ್ನು ತಿರುವುತ್ತಿರಿ.
3. ಮಿಶ್ರಣವನ್ನು ತಣ್ಣಗಾಗಲು ಬಿಡಿ ಮತ್ತು ಸಂಪೂರ್ಣವಾಗಿ ತಂಪಾದ ನಂತರ ಅದನ್ನು ಗಾಜಿನ ಪಾತ್ರೆಯಲ್ಲಿ ಸುರಿಯಿರಿ. ಇದನ್ನು ಸುಮಾರು ಒಂದು ವಾರ ಕತ್ತಲೆಯ ಸ್ಥಳದಲ್ಲಿ ಮುಚ್ಚಿಡಿ.
4. . ಇದು ದ್ರವವನ್ನು ಆಲ್ಕೋಹಾಲ್ ಯುಕ್ತವಾಗಿಸುತ್ತದೆ. ಈ ದ್ರಾವಣಕ್ಕೆ ಮದರ್ ಆಫ್ ವಿನೆಗರ್ ಅನ್ನು ಸೇರಿಸಿ. ಮದರ್ ಆಫ್ ವಿನೆಗರ್ ಸೆಲ್ಯುಲೋಸ್ ಮತ್ತು ಅಸಿಟಿಕ್ ಆ್ಯಸಿಡ್ ಬ್ಯಾಕ್ಟೀರಿಯಾವನ್ನು ಒಳಗೊಂಡಿರುವ ಒಂದು ವಸ್ತು. ಈ ಬ್ಯಾಕ್ಟೀರಿಯಾವು ಆಮ್ಲಜನಕದ ಸಹಾಯದಿಂದ ಆಲ್ಕೋಹಾಲ್ ಅನ್ನು ಅಸಿಟಿಕ್ ಆಮ್ಲವಾಗಿ ಪರಿವರ್ತಿಸಬಹುದು.
5. ಮದರ್ ಆಫ್ ವಿನೆಗರ್ ಸೇರಿಸಿದ ನಂತರ, ಮಿಶ್ರಣವನ್ನು 4 - 12 ವಾರಗಳವರೆಗೆ ಬಿಟ್ಟುಬಿಡಿ. ನಂತರ ಆ ಸಮಯದಲ್ಲಿ ಅದು ವಿನೆಗರ್ ಆಗಿ ಬದಲಾಗುತ್ತದೆ. ತೆಂಗಿನಕಾಯಿ ವಿನೆಗರ್ ಅನೇಕ ಉಪಯೋಗಗಳನ್ನು ಹೊಂದಿದೆ, ಇದು ಇತರ ವಿನೆಗರ್ಗಳಂತೆಯೇ ಇರುತ್ತದೆ. ಗ್ಯಾಸ್ಟ್ರಿಕ್ ತೊಂದರೆ ಇದ್ದವರು ಇದನ್ನು ಸೇವಿಸಬಾರದು. ಏಕೆಂದರೆ ವಿನೆಗರ್ನಲ್ಲಿ ಹೆಚ್ಚು ಆಮ್ಲೀಯತೆ ಇರುತ್ತದೆ. ಬೇಕಾದಲ್ಲಿ ಅದಕ್ಕೆ ಕೊಂಚ ನೀರು ಬೆರೆಸಿ ನಂತರ ಸೇವಿಸಬಹುದು. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.