ಬೆಂಗಳೂರು: ನಗರದಲ್ಲಿ ಬೇಸಿಗೆ ಶುರುವಾಗುವುದಕ್ಕೂ ಮುನ್ನವೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಸಿಲಿಕಾನ್ ಸಿಟಿಯ ಜನ ತತ್ತರಿಸುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನ ಉಷ್ಣತೆ ಫೆಬ್ರವರಿ ಮಾಸದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಫೆ. 14 ರಂದು 31.2 ರಷ್ಟಿದ್ದ ಉಷ್ಣಾಂಶ ಫೆ. 18 ರಂದು 32.6 ಕ್ಕೆ ಏರಿಕೆಯಾಗಿದೆ . ಈ ಬಾರಿಯ ಏಪ್ರಿಲ್ ನಲ್ಲಿ ಉಷ್ಣಾಂಶ 39-40 ಡಿಗ್ರಿ ಮುಟ್ಟುವ ಸಂಭವ ಹೆಚ್ಚಾಗಿದ್ದು, ಜನತೆ ಆತಂಕಕ್ಕೆ ಒಳಗಾಗುವಂತಾಗಿದೆ. ಮಳೆ ಪ್ರಮಾಣ ಕುಸಿತ, ವಾಹನಗಳ ಹೆಚ್ಚಳ, ಮರಗಳ ನಾಶ ಹಾಗೂ ಅವುಗಳಿಂದುಂಟಾಗಿರುವ ತೇವಾಂಶದ ಕೊರತೆ ಉಷ್ಣಾಂಶ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.