ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಸಣ್ಣ ಗಿಡಗಳೂ ಸಹ ದೊಡ್ಡ ದೊಡ್ಡ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ. ಇದು ಒಂದು ಪವಿತ್ರವಾದ ಮೂಲಿಕೆಯಾಗಿದ್ದು, ಹಲವು ಪೂಜಾ ಕೆಲಸಗಳಲ್ಲಿ ಕೂಡಾ ಇದನ್ನು ಬಳಸುತ್ತಾರೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಾಂಶಗಳು ಇದ್ದೂ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಇದ್ದೂ ದೇಹವನ್ನು ಆರೋಗ್ಯಯುತವಾಗಿ ಕಾಪಾಡಲು ಸಹಾಯಕಾರಿಯಾಗಿದೆ.
* ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಿದ್ದರೆ ತುಳಸಿ ಎಲೆಗಳ ರಸಕ್ಕೆ ನಿಂಬೆ ರಸ ಸೇರಿಸಿ ದಿನಕ್ಕೆ 2 ಬಾರಿ ಮೂಖಕ್ಕೆ ಲೇಪಿಸಿದರೆ ಕಲೆಗಳು ಮಾಯವಾಗುತ್ತದೆ
* ತುಳಸಿಯು ಜೀರ್ಣಕಾರಿ ನರಗಳ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಅಮೈನೋ ಆಮ್ಲಗಳು, ಕೊಲೆಸ್ಟರಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಚಯಾಪಚಯ ಕ್ರಿಯೆಯಲ್ಲಿ ಬಿಡುಗಡೆಯಾಗುವ ಕಿಣ್ವಗಳಿಗೆ ಪೂರೈಸುವ ಮೂಲಕ ಸಹಾಯ ಮಾಡುತ್ತದೆ
* ತುಳಸಿ ಎಲೆಗಳಿಗೆ ನೀರು ಮತ್ತು ಜೇನುತುಪ್ಪವನ್ನು ಸೇರಿಸಿ ಕಷಾಯ ಮಾಡಿ ರಾತ್ರಿ ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಹೇಳಲಾಗಿದೆ.
* ತುಳಸಿ ಎಲೆಗಳು ಮುಖದ ಮೇಲಿರುವ ಕಲ್ಮಶಗಳನ್ನು ತೆಗೆದುಹಾಕಲು ನೆರವಾಗುತ್ತವೆ. ತುಳಸಿ ಎಲೆ, ಶ್ರೀಗಂಧದ ಪೇಸ್ಟ್ ಮತ್ತು ರೋಸ್ ವಾಟರ್ ಅನ್ನು ಬೆರಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯುವುದರಿಂದ ಮುಖದ ಮೇಲಾಗುವ ಮೊಡವೆಯನ್ನು ತಡೆಯಬಹುದು.
* ಚರ್ಮದ ತುರಿಕೆ ಹೆಚ್ಚಿದ್ದರೆ ತುಳಸಿ ಎಲೆ ರಸಕ್ಕೆ ನಿಂಬೆ ರಸ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಬೇಗ ಕಡಿಮೆಯಾಗುತ್ತದೆ
* ಹುಳುಕಡ್ಡಿ ಆಗಿದ್ದರೆ ತುಳಸಿ ಎಲೆಯ ರಸಕ್ಕೆ ಉಪ್ಪು ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಶಮನವಾಗುತ್ತದೆ.
* ತುಳಸಿಯ ಸೇವನೆಯಿಂದ ಥೈರಾಯ್ಡ್ ಗ್ರಂಥಿಗಳು ಈ ಎಲ್ಲಾ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ
* ತುಳಸಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಎಲ್ಲಾ ರೀತಿಯ ಜ್ವರ ಶಮನವಾಗುತ್ತದೆ.
* ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯನ್ನು ಸಾಸಿವೆ ಎಣ್ಣೆಯ ಜೊತೆ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ನೋವಿರುವ ಹಲ್ಲಿಗೆ ಹಚ್ಚಿ ಮಲಗಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.
ಹೀಗೆ ಸಕಲ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವಂತ ತುಳಸಿಯು ಆರೋಗ್ಯದಾಯಕವಾಗಿದ್ದು ಸಾಕಷ್ಟು ಔಷಧಿಯ ಗುಣಗಳನ್ನು ಇದು ಹೊಂದಿದೆ ಇದು ಮನೆಯಲ್ಲಿಯೇ ಸಿಗುವ ಸುಲಭವಾದ ವಸ್ತುವಾಗಿರುವ ಕಾರಣ ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಕೆ ಮಾಡಬಹುದು ಆದರೂ ಸಹ ವೈದ್ಯರ ಸಲಹೆ ಇದ್ದಲ್ಲಿ ಇನ್ನೂ ಉತ್ತಮ.