Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಗಿಯ ಉಪಯೋಗ ಕೇಳಿದ್ರೆ ನೀವು ಚಕಿತಗೊಳ್ಳೋದು ಗ್ಯಾರಂಟಿ...!

ರಾಗಿಯ ಉಪಯೋಗ ಕೇಳಿದ್ರೆ ನೀವು ಚಕಿತಗೊಳ್ಳೋದು ಗ್ಯಾರಂಟಿ...!
ಬೆಂಗಳೂರು , ಗುರುವಾರ, 12 ಜುಲೈ 2018 (14:48 IST)
ಇತ್ತೀಚಿನ ದಿನಗಳಲ್ಲಿ ರಾಗಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ  ಇದಕ್ಕೆ ಅದರ ಆರೋಗ್ಯಕ್ಕೆ ಸಹಾಯಕಾರಿಯಾಗಿರುವ ಅಂಶವೇ ಪ್ರಧಾನ ಕಾರಣ. ಇದನ್ನು ಭಾರತ ಸೇರಿದಂತೆ ಆಫ್ರಿಕಾ, ಈಜಿಪ್ಟ್ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಕೂಡಾ ಬೆಳೆಯುತ್ತಾರೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಈ ರಾಗಿಗೆ ಇದೆ. ಅದು ಯಾವುದು ಎಂದು ತಿಳಿಯುವ ಕೂತುಹಲ ನಿಮಗಿದ್ರೆ ಈ ವರದಿ ಓದಿ....
* ಅಸ್ತಮಾ ತಡೆಗಟ್ಟುವಿಕೆಗೆ: ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರವಾಗಿದ್ದು, ಇದನ್ನು ಬಳಕೆ ಮಾಡುವ ಮೂಲಕ ಆರೋಗ್ಯ ವೃದ್ಧಿಗೊಳಿಸುವುದು ಮಾತ್ರವಲ್ಲದೇ ರೋಗ ಬರದಂತೆ ಕೂಡಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
 
* ಆಂಟಿಆಕ್ಸಿಡೆಂಟ್ ಪ್ರಾಪರ್ಟೀಸ್‌ಗಳನ್ನು ಹೊಂದಿದೆ: ಧಾನ್ಯಗಳ ಎಲ್ಲಾ ಪ್ರಭೇದಗಳು ಪಾಲಿಫೆನೊಲ್ಸ್ ಎಂದು ಕರೆಯಲ್ಪಡುವ ಫೈಟೊಕೆಮಿಕಲ್‌ಗಳಲ್ಲಿ ತುಂಬಿರುತ್ತವೆ. ಅವು ಪ್ರಬಲವಾಗಿ ರೋಗನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮನುಷ್ಯನ ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸಬಹುದು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
 
* ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ: ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.
 
* ರಕ್ತಹೀನತೆಯನ್ನು ತಡೆಯುತ್ತದೆ: ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.
 
*ವಿಷ ಆಮ್ಲವನ್ನು ತೆಗೆದುಹಾಕುತ್ತದೆ: ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ
 
* ಹೃದಯದ ಆರೋಗ್ಯ ಕಾಪಾಡುತ್ತದೆ: ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಇದು ತಗ್ಗಿಸುತ್ತದೆ
 
* ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ : ಕಡಿಮೆ ಫೈಬರ್‌ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. 
 
* ಮಧುಮೇಹವನ್ನು ನಿಯಂತ್ರಿಸುತ್ತದೆ : ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರುವ ರೋಗವಾಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್‌ಗಳ ದಕ್ಷತೆಯನ್ನು ಹೆಚ್ಚಿಸುವಂತಹ ಪ್ರಮುಖ ಖನಿಜಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ರಾಗಿಯನ್ನು ಸೇವಿಸುವ ಜನರಲ್ಲಿ 30% ದಷ್ಟು ಮಧುಮೇಹವು ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 
   
ಒಟ್ಟಿನಲ್ಲಿ ರಾಗಿಯು ವಿಶಿಷ್ಟ ಪೋಶಕಾಂಶಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ರಾಗಿಯನ್ನು ಗಂಜಿ, ರಾಗಿ ಅಂಬಲಿ, ರಾಗಿ ಮುದ್ದೆ, ಮತ್ತು ರಾಗಿಯನ್ನ ಪುಡಿ ಮಾಡಿಕೊಂಡು ಹಾಲಿನಲ್ಲಿ ಬೆರೆಸಿ ಹೀಗೆ ಹಲವಾರು ವಿಧಗಳಲ್ಲಿ ನಾವು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಇಷ್ಟೆಲ್ಲ ಆರೋಗ್ಯಕ್ಕೆ ಅವಶ್ಯಕವಾಗಿರುವ ಅಂಶ ಹೊಂದಿರುವ ರಾಗಿಯನ್ನು ಬಳಸಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಉಗುರುಗಳಿಗೆ ಹಚ್ಚಿದ ಬಣ್ಣಗಳು ತುಂಬಾದಿನ ಚೆನ್ನಾಗಿರಲು ಹೀಗೆ ಮಾಡಿ..