Health Care: ಬದಲಾಗುತ್ತಿರುವ ಜೀವನಶೈಲಿಯಿಂದ ನಮ್ಮ ಕಣ್ಣುಗಳ ಆರೋಗ್ಯ ಹಾಳಾಗುತ್ತಿರುವುದಂತು ಸುಳ್ಳಲ್ಲ. ಆದರೆ ನಾವು ಸೇವಿಸುವ ಆಹಾರದಿಂದಲೇ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .
ಕೊರೊನಾ ಸೋಂಕು ಹರಡುವುದನ್ನ ತಪ್ಪಿಸುವ ಸಲುವಾಗಿ ಸುಮಾರು ಒಂದು ವರೆ ವರ್ಷಗಳಿಂದ ಹೆಚ್ಚಿನ ಜನರಿಗೆ ಮನೆಯಿಂದಲೆ ಕೆಲಸ ಮಾಡಲು ಹೇಳಲಾಗಿದೆ. ಅನೇಕ ಕಂಪನಿಗಳು ಇನ್ನೂ ಒಂದು ವರ್ಷ ಇದನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿವೆ. ಈ ಕೆಲಸದ ಕಾರಣದಿಂದ ಜನರು ಮೊಬೈಲ್, ಲ್ಯಾಪ್ ಟಾಪ್ ನೋಡುವುದು ಹೆಚ್ಚಾಗಿದೆ. ಇದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದ ನಮ್ಮ ಕಣ್ಣುಗಳ ಆರೋಗ್ಯ ಹಾಳಾಗುತ್ತಿರುವುದಂತು ಸುಳ್ಳಲ್ಲ. ಆದರೆ ನಾವು ಸೇವಿಸುವ ಆಹಾರದಿಂದಲೇ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು . ಕೆಲವೊಂದು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಬೀಜಗಳು ಇತ್ಯಾದಿ ನಮ್ಮ ಆರೋಗ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇವುಗಳಲ್ಲಿ ಇರುವಂತಹ ಪೋಷಕಾಂಶಗಳು ದೇಹದ ಆರೋಗ್ಯದ ಜತೆಗೆ ಕೆಲವೊಂದು ಅಂಗಾಂಗಗಳನ್ನು ಕೂಡ ರಕ್ಷಣೆ ಮಾಡುತ್ತದೆ. ಈ ಆಹಾರಗಳು ಕಣ್ಣಿನ ಸಮಸ್ಯೆ ಬರದಂತೆ ಹಾಗೂ ಇದ್ದರೆ ಅದಕ್ಕೆ ಪರಿಹಾರ ನೀಡುತ್ತದೆ. ಪ್ರತಿ ನಿತ್ಯ ನಾವು ಸೇವಿಸುವ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇವನೆ ಮಾಡುವುದು ಮುಖ್ಯವಾಗುತ್ತದೆ. ಬೀನ್ಸ್, ಬಟಾಣಿ, ಬೇಳೆಯು ಬಯೋ ಫ್ಲೆವನಾಯ್ಡ್ಸ್ ಮತ್ತು ಸತುವಿನ ಉತ್ತಮ ಮೂಲ. ಸತು ಕೊರತೆಯು ರಾತ್ರಿ ಕುರುಡುತನಕ್ಕೆ ಕಾರಣವಾಗುತ್ತದೆ. ಕಡಲೆಕಾಯಿ, ಬೆಳ್ಳುಳ್ಳಿ, ಎಳ್ಳು, , ಸೋಯಾಬೀನ್, ಅಗಸೆಬೀಜ, ಬಾದಾಮಿ, ಗೋಧಿ, ಮೊಟ್ಟೆಯ ಹಳದಿ ಲೋಳೆಯಲ್ಲಿ ಸತು ಸಮೃದ್ಧವಾಗಿದೆ. . ಇದು ರೆಟಿನಾವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಪೊರೆಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಾಲ್ಮನ್ ಮೀನು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳು ಇದ್ದು, ಇದು ಕಣ್ಣಿನ ರಕ್ಷಣೆಗೆ ಬಹಳ ಮುಖ್ಯವಾಗುತ್ತದೆ. ಒಮೆಗಾ-3 ಕೊಬ್ಬಿನಾಮ್ಲವು ಕಣ್ಣು ಒಣಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಮೀನಿನ ಸೇವನೆ ಮಾಡಿದರೆ ಉತ್ತಮ.
ಸಿಟ್ರಸ್ ಹಣ್ಣುಗಳು ಮತ್ತು ಬೆರ್ರಿಗಳು ವಿಟಮಿನ್ ಸಿ ಯ ಸಮೃದ್ಧ ಮೂಲಗಳು ಎಂದು ಹೇಳಲಾಗುತ್ತದೆ. ಕಣ್ಣುಗಳು ಆರೋಗ್ಯವಾಗಿರಲು ಕಿತ್ತಳೆ, ದ್ರಾಕ್ಷಿಹಣ್ಣು, ನಿಂಬೆಹಣ್ಣು ಮತ್ತು ಹಣ್ಣುಗಳನ್ನು ಸೇವನೆ ಮಾಡುವುದು ಮುಖ್ಯವಾಗುತ್ತದೆ. ಇದು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡುತ್ತದೆ.
ವಿಟಮಿನ್ ಸಿ ಆ್ಯಂಟಿ ಆಕ್ಸಿಡೆಂಟ್ ಹೊಂದಿದ್ದು,, ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕೋಸುಗಡ್ಡೆ, ಮೊಳಕೆಕಾಳು, ಕರಿಮೆಣಸುಗಳಲ್ಲಿ ಮತ್ತು ಪೇರಲೆ ವಿಟಮಿನ್ ಸಿ ಇದ್ದು, ಅವುಗಳ ಸೇವನೆ ಒಳ್ಳೆಯದು. ಬಾದಾಮಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದರಲ್ಲಿನ ವಿಟಮಿನ್ ಇ, ವಿಟಮಿನ್ ಎ ಕಣ್ಣಿನ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಟಮಿನ್ ಇ ಅಂಶವು ಕಣ್ಣಿನ ಪೊರೆ ಮತ್ತು ವಯಸ್ಸಾಗುವ ವೇಳೆ ಕಂಡುಬರುವ ಕಣ್ಣಿನ ದೃಷ್ಟಿಯ ಸಮಸ್ಯೆಯಿಂದ ಕಾಪಾಡುತ್ತದೆ. ಕೇವಲ ಬಾದಾಮಿ ಅಲ್ಲದೇ., ವಿಟಮಿನ್ ಇ ಅಂಶವು ನೆಲಗಡಲೆ, ಹಝೆಲ್ ನಟ್, ಸೂರ್ಯಕಾಂತಿ ಬೀಜ ಇತ್ಯಾದಿಗಳಲ್ಲಿ ಲಭ್ಯವಿದೆ.
ಮೊಟ್ಟೆಯ ಬಿಳಿ ಭಾಗದಂತೆ ಕ್ಯಾರೇಟ್ ನಲ್ಲಿ ಕೂಡ ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶವಿದೆ. ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶವು ಕಣ್ಣಿನ ಮೇಲ್ಮೈಯನ್ನು ರಕ್ಷಣೆ ಮಾಡಿ, ಕಣ್ಣಿಗೆ ಕಾಡುವ ಸೋಂಕು ಮತ್ತು ಇನ್ನಿತರ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಹಾಲು ಮತ್ತು ಮೊಸರು ಕಣ್ಣಿಗೆ ಬಹಳ ಆರೋಗ್ಯಕಾರಿ. ಇವುಗಳಲ್ಲಿ ಸತು ಹಾಗೂ ವಿಟಮಿನ್ ಎ ಇದ್ದು, ವಿಟಮಿನ್ ಎ ಕಾರ್ನಿಯಾವನ್ನು ರಕ್ಷಣೆ ಮಾಡುತ್ತದೆ. ಸತುವಿನ ಅಂಶವು ಕಣ್ಣಿನ ಪೊರೆ ತಡೆಯುತ್ತದೆ ಮತ್ತು ರಾತ್ರಿ ದೃಷ್ಟಿ ಸರಿಯಾಗಿರಲು ಸಹಕರಿಸುತ್ತದೆ.