Webdunia - Bharat's app for daily news and videos

Install App

ಬಾಳೆ ಹೂವಿನಲ್ಲಿದೆ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳು

Webdunia
ಭಾನುವಾರ, 12 ಸೆಪ್ಟಂಬರ್ 2021 (08:21 IST)
Banana Flower: ಇದರಲ್ಲಿ ಸಹ  ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ನೋವನ್ನು ಕಡಿಮೆ  ಮಾಡುವ ಗುಣವನ್ನು ಹೊಂದಿದೆ. ಕೆಲವು ದೇಶಗಳಲ್ಲಿ, ಇದನ್ನು ಸಲಾಡ್ ಆಗಿ  ಬಳಸಲಾಗುತ್ತದೆ.

 ಬಾಳೆ ಹೂವು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಬಾಳೆ ಕೊನೆಯಲ್ಲಿ ಹಣ್ಣುಗಳ ಜೊತೆ ಇದು ಸಹ ಇರುತ್ತದೆ.  ಈ ಹೂವು ದೊಡ್ಡದಾಗಿದ್ದು ಬಾಳೆಹಣ್ಣಿನ ಗೊಂಚಲಿನ ತುದಿಯಿಂದ ಬೆಳೆಯುತ್ತದೆ ಮತ್ತು ಕಡು ನೇರಳೆ ಕೆಂಪು ಹೂವನ್ನು ಹೊಂದಿರುತ್ತದೆ.  ನಾವು ಸಾಮಾನ್ಯವಾಗಿ ಬಾಳೆಹಣ್ಣುನ್ನು, ಅದರ ದಿಂಡನ್ನು ಬಳಕೆ ಮಾಡುತ್ತೇವೆ. ಆದರೆ ಈ ಹೂವುಗಳಲ್ಲಿ ಕೂಡ ಆರೋಗ್ಯ ಪ್ರಯೋಜನಗಳಿವೆ.  ಇದರಲ್ಲಿ ಸಹ  ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ನೋವನ್ನು ಕಡಿಮೆ  ಮಾಡುವ ಗುಣವನ್ನು ಹೊಂದಿದೆ. ಕೆಲವು ದೇಶಗಳಲ್ಲಿ, ಇದನ್ನು ಸಲಾಡ್ ಆಗಿ  ಬಳಸಲಾಗುತ್ತದೆ.
ಬಾಳೆ ಹೂವು ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ
ಸೋಂಕಿನ ವಿರುದ್ಧ ಹೋರಾಡುತ್ತದೆ.
ಬಾಳೆ ಹೂವು ಸೋಂಕಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಏಕೆಂದರೆ ಇದು ಎಥೆನಾಲ್ ಹೂಗಳನ್ನು ಹೊಂದಿರುವುದರಿಂದ ಇದು ರೋಗಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಇದು ಗಾಯವನ್ನು ಸಹ ಗುಣಪಡಿಸುವ ಅಂಶವನ್ನು ಹೊಂದಿದೆ. ಬಾಳೆ ಹೂವಿನ ಸಾರಗಳು ಮಲೇರಿಯಾ ರೋಗವನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.
ಮಧುಮೇಹ ಮತ್ತು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ

ಮಧುಮೇಹಿ ರೋಗಿಗಳು ಬಾಳೆ ಹೂಗಳನ್ನು ಬೇಯಿಸಿ ಅಥವಾ  ಹಾಗೆಯೇ ಸೇವಿಸಬಹುದು. ಇದರಿಂದ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ  ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುವ ಫೈಬರ್ ಮತ್ತು ಕಬ್ಬಿಣವನ್ನು ಹೊಂದಿದೆ. ನೀವು ಮಾಡಬೇಕಾಗಿರುವುದು  ಇಷ್ಟೇ, ಬಾಣಲೆಯಲ್ಲಿ ಎಣ್ಣೆಯನ್ನು  ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿಯುವವರೆಗೂ ಬಿಡಿ, ನಂತರ ಳಿ ಟೀಸ್ಪೂನ್ ಉದ್ದಿನ ಬೆಳೆ ಹಾಕಿ ಅದು ಕಂದು ಬಣ್ಣ ಬರುವವರೆಗೆ  ಹುರಿಯಿರಿ.  ಅದಕ್ಕೆ ನಂತರ ಹುಣಸೆ ಹಣ್ಣು ಹಾಕಿ , ನಂತರ ಅದಕ್ಕೆ  1/8 ಕಪ್ ಕತ್ತರಿಸಿದ ಆಲೂಗಡ್ಡೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ.  ಆ ಮಿಶ್ರಣಕ್ಕೆ ಕತ್ತರಿಸಿದ ಬಾಳೆ ಹೂಗಳನ್ನು ಒಂದು ಚಮಚ ಹಾಕಿ, ಅದಕ್ಕೆ ಸಾಂಬಾರ್ ಪುಡಿ, ¼ ಟೀಸ್ಪೂನ್. ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಅದನ್ನು ಮುಚ್ಚಿಟ್ಟು  5 ನಿಮಿಷಗಳ ಕಾಲ ಬೇಯಿಸಬೇಕು. ನಂತರ ಒಂದು ಚಮಚ ತೆಂಗಿನ ತುರಿ ಸೇರಿಸಿ ಸೇವನೆ ಮಾಡಿ. ಇದು ಮಧುಮೇಹಿಗಳಿಗೆ ಉತ್ತಮ ಪರಿಣಾಮ ಬೀರುತ್ತದೆ.
ಋತುಸ್ರಾವದ ಸಮಯದಲ್ಲಿ ಸಹಾಯ ಮಾಡುತ್ತದೆ.
ಇದು ಅಧಿಕ ರಕ್ತಸ್ರಾವವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರೊಜೆಸ್ಟರಾನ್ ಅನ್ನು ಹೆಚ್ಚಿಸುತ್ತದೆ. ¼ ಕಪ್ ಬಾಳೆ ಹೂವನ್ನು ಸ್ವಲ್ಪ ನೀರು ಮತ್ತು ಉಪ್ಪಿನಲ್ಲಿ ಸಂಪೂರ್ಣವಾಗಿ ಬೇಯಿಸಿ. ಅದು ತಣ್ಣಗಾದ ನಂತರ, ¼ ಕಪ್ ತೆಂಗಿನಕಾಯಿಯಲ್ಲಿ, 2 ಗ್ರಾಂ. ಮೆಣಸಿನಕಾಯಿ, ಳಿ ಟೀಸ್ಪೂನ್ ಜೀರಿಗೆಯನ್ನು  ಹಾಕಿ ಮಿಶ್ರಣ ಮಾಡಿ. ನಂತರ ಅದಕ್ಕೆ ಮೊಸರನ್ನು ಹಾಕಿ. ಇದನ್ನು ಅನ್ನದೊಂದಿಗೆ ತಿಂದರೆ ಅಧಿಕ ರಕ್ತಸ್ರಾವ ಉಂಟಾಗುವುದನ್ನ ತಡೆಯುತ್ತದೆ.
ಇದು ಫೈಬರ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದು ತೂಕ ಇಳಿಸಕೊಳ್ಳಲು ಸಹ  ಕಾರಣವಾಗುತ್ತದೆ. ಇದು ಹೊಟ್ಟೆಯ ಬೊಜ್ಜನ್ನು ಕರಗಿಸಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾಳೆ ಹೂಗಳನ್ನು ಸಲಾಡ್ ಮತ್ತು ಸೂಪ್  ಮಾಡಿಕೊಂಡು ಸೇವನೆ ಮಾಡಬಹುದು.  ಇದು ಮನಸ್ಸಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಬಾಳೆ ಹೂವುಗಳಲ್ಲಿರುವ ಮೆಗ್ನೀಸಿಯಮ್ ಕಾರಣದಿಂದಾಗಿ ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಖಿನ್ನತೆ ಹೋಗಲಾಡಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments