Webdunia - Bharat's app for daily news and videos

Install App

ಐಪಿಎಲ್ ಹೆಸರಿನಲ್ಲಿ ವಿಪಕ್ಷಗಳಿಗೆ ಟಾಂಗ್ ಕೊಟ್ಟ ಪ್ರಧಾನಿ ಮೋದಿ

Webdunia
ಶನಿವಾರ, 4 ಮೇ 2019 (08:06 IST)
ನವದೆಹಲಿ: ಲೋಕಸಭೆ ಚುನಾವಣಾ ಕಣದಲ್ಲಿ ಇಷ್ಟು ದಿನ ಕೇವಲ ರಾಜಕೀಯ ವಿಚಾರವಾಗಿ ವಿಪಕ್ಷಗಳಿಗೆ ಟಾಂಗ್ ಕೊಡುತ್ತಿದ್ದ ಪ್ರಧಾನಿ ಮೋದಿ ಇದೀಗ ಭಾರತದ ಯುವಜನರ ಮೆಚ್ಚಿನ ಕ್ರೀಡೆ ಐಪಿಎಲ್ ಕೂಟದ ಬಗ್ಗೆ ಮಾತನಾಡಿದ್ದಾರೆ.


ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಯುಪಿಎ ಕಾಲಾವಧಿಯಲ್ಲಿ ಅಂದರೆ 2009 ರಲ್ಲಿ ಲೋಕಸಭೆ ಚುನಾವಣೆ ನಡೆಯುವಾಗ ಭಾರತದಲ್ಲಿ ಐಪಿಎಲ್ ಆಯೋಜಿಸಲು ಸಾಧ್ಯವಿಲ್ಲ ಎಂದು ಅಂದಿನ ಯುಪಿಎ ಸರ್ಕಾರ ಹೇಳಿದ್ದಕ್ಕೆ ಬಿಸಿಸಿಐ ಇದನ್ನು ದ. ಆಫ್ರಿಕಾದಲ್ಲಿ ಆಯೋಜಿಸಿದ್ದನ್ನು ಪ್ರಸ್ತಾಪಿಸಿ ಮೋದಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.

‘ಯುಪಿಎ ಕಾಲಾವಧಿಯಲ್ಲಿ ಐಪಿಎಲ್ ನ್ನೂ ಚುನಾವಣೆ ನೆಪದಲ್ಲಿ ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಮೋದಿಗೆ ಐಪಿಎಲ್ ಮತ್ತು ಲೋಕಸಭೆ ಚುನಾವಣೆ ಎರಡನ್ನೂ ಭಾರತದಲ್ಲೇ ಏಕಕಾಲಕ್ಕೆ ಆಯೋಜಿಸುವ ತಾಕತ್ತು ಇದೆ’ ಎಂದು ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದಾರೆ.  ಈ ಮೂಲಕ ಐಪಿಎಲ್ ಹೆಸರಿನಲ್ಲಿ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಯುಪಿಎಗೆ ಭದ್ರತೆಯ ಭಯವಿತ್ತು. ಅದಕ್ಕೇ ಆವತ್ತು ಐಪಿಎಲ್ ಆಯೋಜಿಸಲೂ ಹಿಂದೇಟು ಹಾಕಿದರು. ಆದರೆ ನಾವು ಹಾಗಲ್ಲ, ದೇಶದಲ್ಲಿ ರಾಮ ನವಮಿ ಇರಲಿ, ನವರಾತ್ರಿ ಇರಲಿ, ರಂಜಾನ್ ಬರಲಿ. ಎಲ್ಲವೂ ಅದರ ಪಾಡಿಗೆ ನಡೆಯುತ್ತದೆ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments