ಹಿಂದೂ ಮತಗಳಿಗೆ ಫಸ್ಟ್ ಪ್ರಿಫ್ರೆನ್ಸ್... ಉಳಿದ ಸಮುದಾಯದ ಮತಗಳು ನೆಕ್ಸ್ಟ್... ಹೀಗಂತ ಬಿಜೆಪಿ ಮುಖಂಡ ಹೇಳಿದ್ದಾರೆ.
ನಾವು ಹಿಂದೂಗಳ ಬಗ್ಗೆ ಇದ್ದೇವೆ. ಮುಸ್ಲಿಂರು ಆಗಿನಿಂದಲೂ ಮೂರೋ ನಾಲ್ಕೋ ಮತ ಹಾಕಿರಬೇಕು. ದೇಶ ವಿಭಜನೆಯಾದಾಗ 3 ಕೋಟಿ 3 ಲಕ್ಷ ಮುಸ್ಲಿಂ ಜನ ಇದ್ರು. ಇವತ್ತು 35 ಕೋಟಿ ಆಗಿದೆ.
ಹಿಂದೂಗಳು ಮೂನ್ನೂರು ಕೋಟಿ ಆಗಬಹುದು. ಆದ್ರೆ ಆಗಿಲ್ಲ. ಹತ್ತು ವರ್ಷಕ್ಕೆ ಏನಾಗಬಹುದು? ದೇಶ ವಿಭಜನೆಯಾಗೋದು ಬೇಡ. ಮುಸ್ಲಿಂರಿಗೆ ಎಂಟ್ಹತ್ತು ಮಕ್ಕಳು. ಹಿಂದೂಗಳಿಗಾದ್ರೆ 2-3 ಮಕ್ಕಳು. ಇದ್ರ ಬಗ್ಗೆ ಕಾನೂನು ತಿದ್ದುಪಡಿ ತರಬೇಕಲ್ವಾ..!? ಹೀಗಂತ ತುಮಕೂರಿನಲ್ಲಿ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದಾರೆ.
ಮತ ಚಲಾವಣೆ ಬಳಿಕ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದು, ಇಡೀ ದೇಶ ನೋಡ್ತಿದೆ. ಮೋದಿಯನ್ನ ನೋಡಿ ಮತ ಹಾಕ್ತಿದ್ದಾರೆ. ಬಿಜೆಪಿ ಗೆಲ್ಲೋದು ನೂರರಷ್ಟು ಸತ್ಯ. ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಾವು ಪಾರ್ಟಿಗೆ ಬದ್ದವಾಗಿದ್ದೇವೆ. ದೇವೆಗೌಡರ ಬಗ್ಗೆ ಗೌರವವಿದೆ. ಅವ್ರ ಬಗ್ಗೆ ಏನು ಮಾತನಾಡಲ್ಲ. ಮುದ್ದಹನುಮೇಗೌಡರಿಗೆ ಮತ್ತು ಕೆ.ಎನ್ ರಾಜಣ್ಣರಿಗೆ ಮೋದಿ ಮೇಲೆ ಗೌರವವಿದೆ ಅಂತ ಹೇಳಿದ್ರು.