Publish Date: Thu, 11 Apr 2019 (18:10 IST)
Updated Date: Thu, 11 Apr 2019 (18:12 IST)
ಕಾಂಗ್ರೆಸ್ ಪಕ್ಷವನ್ನು ತಾಯಿ ಸಮಾನ ಅಂತ ಹೇಳುತ್ತಲೇ ತಾಯಿ ಬೆನ್ನಿಗೆ ಚೂರಿ ಹಾಕ್ತಾರೆ. ಹೀಗಂತ ಕೈ ಅಭ್ಯರ್ಥಿ ಹಾಗೂ ಹಿರಿಯ ಸಂಸದರ ವಿರುದ್ಧ ಆರೋಪಿಸಲಾಗಿದೆ.
ಕೆ.ಹೆಚ್.ಮುನಿಯಪ್ಪ ವಿರುದ್ಧ ಡಾ.ಎಂ.ಸಿ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸುಧಾಕರ್ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಹೇಳಿಕೆ ನೀಡಿರುವ ಸುಧಾಕರ್, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಪ್ರಚಾರ ನಡೆಸಿದ್ರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ರು ಪರವಾಗಿಲ್ಲ. ಆದ್ರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪನಿಗೆ ಮತ ಹಾಕಬೇಡಿ. ವಿ.ಮುನಿಯಪ್ಪ ಬದಲು ಮಗಳಿಗೆ ಮಂತ್ರಿ ಮಾಡಲು ಲಾಬಿ ಮಾಡಿದ್ರು ಎಂದು ದೂರಿದ್ರು.
ವಿ.ಮುನಿಯಪ್ಪ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.