Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಮಿಳುನಾಡಿನ ಅಮ್ಮ ಕ್ಯಾಂಟಿನ್, ರಾಜ್ಯದಲ್ಲಿನ ಇಂದಿರಾ ಕ್ಯಾಂಟಿನ್ ಹಾಗೂ ಅಪ್ಪ ಕ್ಯಾಂಟಿನ್ ಮಾದರಿಯಲ್ಲಿ ಮಂಡ್ಯದಲ್ಲಿ ಚಿತ್ರನಟಿ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ರಮ್ಯಾ ಕ್ಯಾಂಟಿನ್ ಆರಂಭವಾಗಿದೆ.
ರಮ್ಯಾ ಕ್ಯಾಂಟಿನ್‍ನಲ್ಲಿ ಇಡ್ಲಿ, ವಡೆ, ದೋಸೆ, ಮುದ್ದೆ, ಅನ್ನ ಸಾಂಬಾರ್, ಸೇರಿದಂತೆ ಅನೇಕ ಬಗೆಯ ತರಹೇವಾರಿ ತಿಂಡಿಗಳು ದೊರೆಯುತ್ತವೆ. ಕೇವಲ ಹತ್ತು ರೂಪಾಯಿಗಳಿಗೆ ಕ್ಯಾಂಟಿನ್‍ನಲ್ಲಿ ತಿಂಡಿಗಳು ಲಭ್ಯವಿದ್ದು, ಪಾರ್ಸಲ್ ವ್ಯವಸ್ಥೆಯೂ ಒದಗಿಸಲಾಗಿದೆ.
ರಮ್ಯಾ ಅವರ ಅಭಿಮಾನಿಗಳು ಕ್ಯಾಂಟಿನ್ ಆರಂಭಿಸಿದ್ದು, ರಮ್ಯಾ ಅವರು ಮಂಡ್ಯ ಜಿಲ್ಲೆಯಲ್ಲಿ ಮತ್ತೆ ರಾಜಕಾರಣ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದು, ಈಗ ಕ್ಯಾಂಟಿನ್ ಆರಂಭಿಸಿರುವುದು ಪುಷ್ಟಿ ಒದಗಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.