Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

International Youth Day 2021: ಥೀಮ್, ಇತಿಹಾಸ ಮತ್ತು ಮಹತ್ವ ಇಲ್ಲಿದೆ ನೋಡಿ

International Youth Day 2021: ಥೀಮ್, ಇತಿಹಾಸ ಮತ್ತು ಮಹತ್ವ ಇಲ್ಲಿದೆ ನೋಡಿ
ಬೆಂಗಳೂರು , ಗುರುವಾರ, 12 ಆಗಸ್ಟ್ 2021 (12:49 IST)
ಅಂತಾರಾಷ್ಟ್ರೀಯ ಯುವ ದಿನ 2021: ಈ ವರ್ಷದ ಯುವ ದಿನದ ಥೀಮ್ ಅನ್ನು ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: ಮಾನವ ಮತ್ತು ಗ್ರಹ ಆರೋಗ್ಯಕ್ಕಾಗಿ ಯುವ ನಾವೀನ್ಯತೆ ಎಂದು ನಿರ್ಧರಿಸಲಾಗಿದೆ.

ಪ್ರಪಂಚದೆಲ್ಲೆಡೆ ದುಡಿಯುವ ಕೈಗಳಲ್ಲಿ ಪ್ರಮುಖವಾಗಿ ಯುವಕರಿಗೆ ಆದ್ಯತೆ ನೀಡಲಾಗುತ್ತದೆ. ಈ ಹಿನ್ನೆಲೆ ಯುವಕರ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರಗಳು, ಇತರರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದು ಸೇರಿ ಹಲವು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ಪ್ರತಿ ವರ್ಷ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ವಿಶ್ವಾದ್ಯಂತ ಯುವಜನರು ಕೈಗೊಂಡ ಉಪಕ್ರಮಗಳು ಮತ್ತು ಕ್ರಿಯೆಗಳಿಗೆ ಧ್ವನಿ ನೀಡಿದ ಈ ದಿನವನ್ನು ಅಂತಾರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಯುವ ದಿನದ ಥೀಮ್ ಅನ್ನು "ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: ಮಾನವ ಮತ್ತು ಗ್ರಹ ಆರೋಗ್ಯಕ್ಕಾಗಿ ಯುವ ನಾವೀನ್ಯತೆ" ಎಂದು ನಿರ್ಧರಿಸಲಾಗಿದೆ. ಈ ಥೀಮ್ ಅನ್ನು ಆಯ್ಕೆಮಾಡುವುದರ ಹಿಂದಿನ ಕಾರಣವೆಂದರೆ ಆಹಾರ ವ್ಯವಸ್ಥೆಗಳ ರೂಪಾಂತರದಲ್ಲಿ ಯುವಜನರು ಮಾಡಿರುವ ಪ್ರಯತ್ನದ ಪ್ರಭಾವವನ್ನು ಎತ್ತಿ ತೋರಿಸುವುದು ಎಂದು ಹೇಳಲಾಗಿದೆ. ಗ್ರಹದ ಸಾಮೂಹಿಕ ಸಂರಕ್ಷಣೆಗಾಗಿ ಪ್ರಯತ್ನಗಳು ಮತ್ತು ಆಲೋಚನೆಗಳನ್ನು ಹಾಕುವಲ್ಲಿ ವಯಸ್ಸಾದ ಮತ್ತು ಯುವ ವ್ಯಕ್ತಿಗಳ ಒಳಗೊಳ್ಳುವಿಕೆಯ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಗುರಿಯನ್ನೂ ಈ ಥೀಮ್ ಹೊಂದಿದೆ.
ಅಂತಾರಾಷ್ಟ್ರೀಯ ಯುವ ದಿನದ ಇತಿಹಾಸ
1999ರಲ್ಲಿ ಮೊದಲ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಇನ್ನು, ಈ ವರ್ಷದ (2021) ಅಂತಾರಾಷ್ಟ್ರೀಯ ಯುವ ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಹಾಗೂ ಮಕ್ಕಳು, ಯುವಕರ ಪ್ರಮುಖ ಗುಂಪಿನ ಸಹಯೋಗದೊಂದಿಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು ಈ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಯುವಜನರನ್ನು ಅರ್ಥಪೂರ್ಣ ಚರ್ಚೆ ಮತ್ತು ಭವಿಷ್ಯದ ಬಗ್ಗೆ ಚರ್ಚೆಯಲ್ಲಿ ತೊಡಗಿಸುವುದನ್ನು ಒಳಗೊಂಡಿರುವ ಈವೆಂಟ್ಗಳು ಮತ್ತು ಸ್ಪರ್ಧೆಗಳನ್ನು ಅಂತಾರಾಷ್ಟ್ರೀಯ ಯುವ ದಿನ ಒಳಗೊಂಡಿದೆ. ಯುವಜನರು ಪ್ರಪಂಚದಾದ್ಯಂತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ಯುವ ದಿನದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಯುವ ದಿನದ ಮಹತ್ವ
ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಯುವಜನರು ಇಲ್ಲಿಯವರೆಗೆ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದಂತಹ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಈ ದಿನವು ಅಂತಹ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಮುಂದಿನ ದಿನಗಳಲ್ಲಿ ಈ ರೀತಿಯ ಸನ್ನಿವೇಶಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸಲು ವೇದಿಕೆ ಒದಗಿಸುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಪ್ರಮುಖ ಚರ್ಚೆಗಳು ಮತ್ತು ಯುವಜನರು ಹಾದುಹೋಗುವ ಹೋರಾಟಗಳ ಬಗ್ಗೆಯೂ ಸಹ ಮಾತನಾಡಲಾಗುತ್ತದೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನವೀನ ಕಾರ್ಯವಿಧಾನಗಳನ್ನು ಚರ್ಚಿಸಲಾಗುತ್ತದೆ.
ಈ ವರ್ಷ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ದೇಶಗಳಲ್ಲಿ ಸಾರ್ವಜನಿಕವಾಗಿ ಈವೆಂಟ್ಗಳನ್ನು ಆಯೋಜಿಸಲು ಸಾಧ್ಯವಾಗದಿರಬಹುದು. ಆದರೂ, ಯುವಕರ ಒಳಿತಿಗಾಗಿ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳು ದಿನದ ಚರ್ಚೆಗಳು, ವೆಬ್ನಾರ್ಗಳು ಮತ್ತು ಮಾತುಕತೆಗಳನ್ನು ಆಯೋಜಿಸುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದಂಗಡಿ ಪ್ರವೇಶಕ್ಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯ