ಡಿ.ಕೆ ರವಿ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖಾ ವರದಿಯ ಪ್ರತಿ ನೀಡಿದರೆ ಮರು ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇನ್ನಾದರೂ ವರದಿ ನೀಡಬೇಕು ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಅಳಲು ತೋಡಿಕೊಂಡಿದ್ದಾರೆ.
ಕುಟುಂಬದ ಪರಿಸ್ಥಿತಿಯ ಅರಿವಿದ್ದ ರವಿ ಸಾಯುವವನಲ್ಲ. ಆದ್ದರಿಂದ ಕೊಲೆ ಮಾಡಿರುವ ಸಾಧ್ಯತೆ ಇದೆ. ಈ ಸಾವಿನ ಪ್ರಕರಣವನ್ನು ಸಿಬಿಐ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ವರದಿ ನೀಡುತ್ತಿಲ್ಲ. ಅಧಿಕಾರಿಗಳು ಮುಖ್ಯಮಂತ್ರಿ ಹಿಡಿತದಲ್ಲಿ ಸಿಲುಕಿದ್ದಾರೆ. ವರದಿ ಪ್ರತಿ ದೊರೆಯದಂತೆ ಮಾಡುವ ಮೂಲಕ ಕೋರ್ಟಿಗೆ ಹೋಗುವುದನ್ನು ತಡೆಯುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಡಿ.ಕೆ.ರವಿ ಸತ್ತಾಗ ನಾಲಿಗೆ ಹೊರಬಂದಿರಲಿಲ್ಲ. ಕುತ್ತಿಗೆಯ ಬಳಿ ಇಂಜಕ್ಷನ್ ಗುರುತು ಇತ್ತು. ನಮ್ಮ ಬೀಗ ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋದ ಮೂರು ತಿಂಗಳಲ್ಲಿ ರವಿ ಪ್ರಾಣ ಕಳೆದುಕೊಂಡಿದ್ದಾನೆ. ಸಚಿವ ಜಾರ್ಜ್, ನಾರಾಯಣ ಸ್ವಾಮಿ, ವರ್ತೂರು ಪ್ರಕಾಶ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಹೊಣೆಗಾರರಾಗಿದ್ದಾರೆ. ತೆರಿಗೆ ಕಟ್ಟದವರ ವಿರುದ್ಧ ಧ್ವನಿಯೆತ್ತಿದ್ದೆ ಜೀವಕ್ಕೆ ಮುಳುವಾಗಿದೆ ಎಂದರು.
ಡಿವೈಎಸ್ಪಿ ಗಣೇಶ ಕೊಲೆ ಪ್ರಕರಣದಲ್ಲೂ ನ್ಯಾಯ ದೊರೆತಿಲ್ಲ. ನನ್ನ ಮಗನ ಸಾವಿಗೂ ನ್ಯಾಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.