Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಳಗಿನ ಜಾವ ಮೈಕ್ ಮೂಲಕ ಅಜಾನ್ ಕೂಗದೇ ಇರಲು ಮುಸ್ಲಿಂ ಸಂಘಟನೆ ನಿರ್ಧಾರ

ಬೆಳಗಿನ ಜಾವ ಮೈಕ್ ಮೂಲಕ ಅಜಾನ್ ಕೂಗದೇ ಇರಲು ಮುಸ್ಲಿಂ ಸಂಘಟನೆ ನಿರ್ಧಾರ
ಬೆಂಗಳೂರು , ಭಾನುವಾರ, 15 ಮೇ 2022 (08:02 IST)
ಬೆಂಗಳೂರು: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದ ಆಜಾನ್ ಕೂಗಿನ ವಿಚಾರ ಕೊನೆಗೂ ಒಂದು ತಾರ್ಕಿಕ ಅಂತ್ಯ ತಲುಪಿದೆ. ಕೋರ್ಟ್ ಹಾಗೂ ಸರ್ಕಾರದ ಆದೇಶದನ್ವಯ ಇನ್ಮುಂದೆ ಮೈಕ್ ನಲ್ಲಿ ಬೆಳಗಿನಜಾವ ಅಜಾನ್ ಕೂಗದಿರಲು ಮುಸ್ಲಿಂ ಸಂಘಟನೆ ನಿರ್ಧರಿಸಿದೆ.
 
ಸರ್ಕಾರದ ನಿರ್ಧಾರಕ್ಕೆ ತಲೆಬಾಗಿರುವ ಮುಸ್ಲಿಂ ಸಂಘಟನೆಗಳು  ಶರೀಯತ್ ಎ ಹಿಂದ್ ಎಂಬ ಸಂಘಟನೆಯ ಕಚೇರಿಯಲ್ಲಿ ಮುಸ್ಲಿಂ ಮುಖಂಡರು ಸಭೆ ಸೇರಿದ್ದು, ಸಭೆಯಲ್ಲಿ  ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರದ ಅನ್ವಯ ಸರ್ಕಾರದ ಆದೇಶದಂತೆ ಡೆಸಿಬಲ್ ಕಂಟ್ರೋಲ್ ಮಾಡಿಕೊಳ್ಳುವಂತೆ ಮತ್ತು ಬೆಳಗ್ಗೆ ಐದು ಗಂಟೆಗೆ ಕೂಗುವ ಆಜಾನ್ ಅನ್ನು ಮೈಕ್ ಮೂಲಕ ಕೂಗದೇ ಇರಲು ನಿರ್ಧಾರ ಮಾಡಲಾಗಿದೆ.
 
ಇನ್ನು ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡ ಉಮರ್ ಶರೀಫ್ ಮಾತನಾಡಿದ್ದು, ಇನ್ನು ಮುಂದೆ ಬೆಳಗಿನ ಜಾವ ಮೈಕ್ ಮೂಲಕ ಅಜಾನ್ ಕೂಗದಂತೆ ನಾವು ನಿರ್ಧಾರ ಕೈಗೊಂಡಿದ್ದೇವೆ. ಸರ್ಕಾರ, ಕೋರ್ಟ್ ಆದೇಶವನ್ನ ಪಾಲನೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದ್ದೇವೆ. ಇದೊಂದು ಇತಿಹಾಸಿಕ ನಿರ್ಧಾರವನ್ನ ನಮ್ಮ ಮುಸ್ಲಿಂ ಸಮುದಾಯ ತೆಗೆದುಕೊಂಡಿದೆ.‌
 
ಮುಸ್ಲಿಮರು ಕಾನೂನಿಗೆ ಬೆಲೆ ಕೊಡ್ತಿಲ್ಲ ಅಂತ ಎಲ್ಲಾ ಕಡೆ ಹಬ್ಬಿತ್ತು, ಆದ್ರೆ ಇದೀಗ ಇವೆಲ್ಲ ಸುಳ್ಳಾಗಿದೆ.‌ ನಾವು ಕೂಡ ಕಾನೂನನ್ನ ಪಾಲನೆ ಮಾಡ್ತೇವೆ ಅಂತ ತೋರಿಸಿಕೊಟ್ಟಿದ್ದೇವೆ.‌ ಸರ್ಕಾರದ ನಿರ್ಧಾರಕ್ಕೆ ನಾವು ಬೆಂಬಲ ನೀಡ್ತೇವೆ ಅನ್ನೋದು ಸಾಬೀತಾಗಿದೆ. ನಮ್ಮ ಈ ನಿರ್ಧಾರ ರಾಜ್ಯದ ಎಲ್ಲಾ ಭಾಗಗಳಿಗೂ ಅನ್ವಯ ಆಗುತ್ತೆ. ಈ ಬಗ್ಗೆ ಎಲ್ಲರು ಕೂಡ ಸಮ್ಮತಿ ನೀಡಿದ್ದಾರೆ ಎಂದಿದ್ದಾರೆ.
 
ಹಿಜಾಬ್, ಹಲಾಲ್ ಸೇರಿದಂತೆ ಒಂದರ ಹಿಂದೆ ಒಂದು ವಿವಾದ ಉದ್ಭವವಾಗಿ ಕೊನೆಗೆ ಬಂದು ನಿಂತಿದ್ದು ಅಝಾನ್ ಮೇಲೆ. ಹಿಂದೂ ಪರ ಸಂಘಟನೆಗಳು ಮುಸ್ಲಿಮರು ಕೂಗು ಅಝಾನ್ ನಿಂದ ಸಮಸ್ಯೆಯಾಗುತ್ತಿದೆ ಎಂದು ಮೈಕ್ ಮೂಲಕ ಆಜಾನ್ ಕೂಗುವುದಕ್ಕೆ ನಿಷೇಧ ಹೇರುವಂತೆ ಪಟ್ಟು ಹಿಡಿಡಿದ್ರು. ಈ ಸಂಬಂಧ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಜಾನ್ ನಿಷೇಧಿಸದಿದ್ದರೆ ದೇವಸ್ಥಾನಗಳಲ್ಲಿ ಮಂತ್ರಾಘೋಷಾ, ಹನುಮಾನ್ ಚಾಲೀಸ ಹಾಕುವ ಸವಾಲು ಹಾಕಿದ್ದರು. 
 
ಮೇ 9ರ ವರೆಗೆ ಗಡುವುಕೊಟ್ಟ ಅವರು, ನಂತರ ಹಿಂದೂ ದೇವಾಲಯಗಲ್ಲಿ ವೇದಘೋಷಾ, ಭಜನೆಗಳನ್ನ ಮೊಳಗಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಇಂತಿಷ್ಟೇ ಡೆಸಿಬಲ್ ಶಬ್ದ ನಿಗದಿ ಮಾಡಿ ಅಝಾನ್ ಮೈಕ್ ವಿವಾದಕ್ಕೆ ಇತಿಶ್ರೀ ಹಾಡಿತ್ತು. ಇದೀಗ ಮುಸ್ಲಿಂ ಮುಖಂಡರು, ರಾಜಕೀಯ ನಾಯಕರು ಜೊತೆ ಸೇರಿ ಬೆಳಗ್ಗಿನ ಆಜಾನ್ ಕೂಗುವುದಕ್ಕೆ  ಮೈಕ್ ಬಳಸಿದಿರಲು ನಿರ್ಧಾರ ಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಟ ಮಠದೊಳಗೆ ಕಳ್ಳರ ಕೈಚಳ, ಬ್ಯಾಗಿನಿಂದ ಚಿನ್ನಾಭರಣ ಮಾಯ