Publish Date: Tue, 23 Jun 2026 (12:26 IST)
Updated Date: Tue, 23 Jun 2026 (12:33 IST)
ಬೆಂಗಳೂರು: ನೀಟ್ (NEET-UG 2026) ಪರೀಕ್ಷಾ ಹಗರಣ ಹಾಗೂ ನಕಲಿ ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಜೂನ್ 16 ರಿಂದ ಜೂನ್ 22 ರವರೆಗೆ ಟೆಲಿಗ್ರಾಂ (Telegram) ಆಪ್ ಮೇಲೆ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು (Ban) ತೆರವುಗೊಳಿಸಿದೆ. ಆದರೆ, ನಿಷೇಧ ತೆರವಾಗಿದ್ದರೂ ಜಿಯೋ, ಏರ್‌ಟೆಲ್ ಸೇರಿದಂತೆ ಹಲವು ನೆಟ್‌ವರ್ಕ್‌ಗಳಲ್ಲಿ ಇನ್ನೂ ಟೆಲಿಗ್ರಾಂ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮೆಸೇಜ್‌ಗಳು ಲೋಡ್ ಆಗುತ್ತಿಲ್ಲ ಎಂದು ಅನೇಕ ಬಳಕೆದಾರರು ದೂರುತ್ತಿದ್ದಾರೆ.
ನಿಷೇಧದ ನಂತರವೂ ನಿಮ್ಮ ಫೋನ್‌ನಲ್ಲಿ ಟೆಲಿಗ್ರಾಂ ಆಪ್ ಓಪನ್ ಆಗದಿದ್ದರೆ ಅಥವಾ "Connecting..." ಎಂದು ತೋರಿಸುತ್ತಿದ್ದರೆ, ಅದನ್ನು ಸರಿಪಡಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಟೆಲಿಗ್ರಾಂ ಆಪ್ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ?ಸರ್ಕಾರ ನಿಷೇಧ ಹಿಂತೆಗೆದುಕೊಂಡರೂ ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ತಮ್ಮ ಸರ್ವರ್‌ಗಳಲ್ಲಿ ಬ್ಲಾಕ್ ಅನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಮಧ್ಯೆ ಆಪ್ ಅನ್ನು ಮೊದಲಿನಂತೆ ಚಾಲನೆ ಮಾಡಲು ಈ ಕ್ರಮಗಳನ್ನು ಕೈಗೊಳ್ಳಿ:
1.ಆಪ್ ಅಪ್‌ಡೇಟ್ ಮಾಡಿ (Update App):
ಅತ್ಯಗತ್ಯ ಕ್ರಮ
.ಮೊದಲು ಗೂಗಲ್ ಪ್ಲೇ ಸ್ಟೋರ್ (Play Store) ಅಥವಾ ಆಪಲ್ ಆಪ್ ಸ್ಟೋರ್‌ಗೆ ಹೋಗಿ ನಿಮ್ಮ ಟೆಲಿಗ್ರಾಂ ಆಪ್ ಅನ್ನು ಲೇಟೆಸ್ಟ್ ವರ್ಷನ್‌ಗೆ ಅಪ್‌ಡೇಟ್ ಮಾಡಿ. ನಿಷೇಧ ಮುಗಿದ ತಕ್ಷಣ ಆಪ್ ಸ್ಟೋರ್‌ಗಳಲ್ಲಿ ಅಪ್ಲಿಕೇಶನ್ ಮರು ಲಭ್ಯವಾಗಿದೆ.
ಲೋಗ್ ಔಟ್ ಮಾಡಿ ಮತ್ತೆ ಲಾಗಿನ್ ಆಗಿ (Re-login)
2.ಲೋಗ್ ಔಟ್ ಮಾಡಿ ಮತ್ತೆ ಲಾಗಿನ್ ಆಗಿ (Re-login):ಸರ್ವರ್ ಸಿಂಕ್ ಮಾಡಲು.ನಿಮ್ಮ ಹಳೆಯ ಸೆಷನ್ ಸರ್ವರ್‌ನೊಂದಿಗೆ ಕನೆಕ್ಟ್ ಆಗದಿದ್ದರೆ, ಆಪ್ ಸೆಟ್ಟಿಂಗ್ಸ್‌ಗೆ ಹೋಗಿ ಒಮ್ಮೆ Log Out ಮಾಡಿ. ನಂತರ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಒಟಿಪಿ (OTP) ಮೂಲಕ ಮತ್ತೆ ಲಾಗಿನ್ ಆಗಿ. ಇದು ಆಪ್ ಅನ್ನು ಹೊಸದಾಗಿ ಸಿಂಕ್ ಮಾಡಲು ಸಹಾಯ ಮಾಡುತ್ತದೆ.
ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿ (Clear Cache)
3.ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿ (Clear Cache):ಡೇಟಾ ರಿಫ್ರೆಶ್ ಮಾಡಲು.ನಿಮ್ಮ ಆಂಡ್ರಾಯ್ಡ್ ಫೋನಿನ Settings > Apps > Telegram > Storage ಗೆ ಹೋಗಿ Clear Cache ಕೊಡಿ. ಇದು ಹಳೆಯ ಬ್ಲಾಕ್ ಆಗಿದ್ದ ನೆಟ್‌ವರ್ಕ್ ಡೇಟಾವನ್ನು ಡಿಲೀಟ್ ಮಾಡಿ ಆಪ್ ಸುಲಭವಾಗಿ ರನ್ ಆಗಲು ನೆರವಾಗುತ್ತದೆ.
ಪ್ರಾಕ್ಸಿ ಸೆಟ್ಟಿಂಗ್ಸ್ ಬಳಸಿ (Use Telegram Proxy)
ನೆಟ್‌ವರ್ಕ್ ಬೈಪಾಸ್ ಮಾಡಲು.
ಇಂಟರ್ನೆಟ್ ಪ್ರೊವೈಡರ್‌ಗಳು ಬ್ಲಾಕ್ ತೆಗೆಯದಿದ್ದರೆ ಟೆಲಿಗ್ರಾಂನ ಇನ್‌ಬಿಲ್ಟ್ 'ಪ್ರಾಕ್ಸಿ' ಬಳಸಬಹುದು. ಆಪ್‌ನ ಸೆಟ್ಟಿಂಗ್ಸ್‌ನಲ್ಲಿ Data and Storage > Proxy Settings > Add Proxy ಗೆ ಹೋಗಿ ಸಕ್ರಿಯವಾಗಿರುವ MTProto ಪ್ರಾಕ್ಸಿ ಲಿಂಕ್‌ಗಳನ್ನು ಆನ್ ಮಾಡಿ. ಇದು ವಿಪಿಎನ್ (VPN) ಇಲ್ಲದೆಯೇ ಆಪ್ ಕನೆಕ್ಟ್ ಆಗುವಂತೆ ಮಾಡುತ್ತದೆ.
ಪ್ರಮುಖ ಸೂಚನೆ (Message Editing Restriction):
ಕೇಂದ್ರ ಸರ್ಕಾರದ ಆದೇಶದಂತೆ ಟೆಲಿಗ್ರಾಂ ಆಪ್ ಮೇಲಿನ ನಿಷೇಧವೇನೋ ತೆರವಾಗಿದೆ, ಆದರೆ ಈಗಾಗಲೇ ಕಳುಹಿಸಿರುವ ಮೆಸೇಜ್‌ಗಳನ್ನು ಎಡಿಟ್ ಮಾಡುವ ಫೀಚರ್ (Message-Editing Feature) ಅನ್ನು ಜೂನ್ 30, 2026 ರವರೆಗೆ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಹಾಗಾಗಿ ತಿಂಗಳ ಕೊನೆಯವರೆಗೆ ನಿಮಗೆ ಮೆಸೇಜ್ ಎಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ನೆಟ್‌ವರ್ಕ್ ಆಪರೇಟರ್‌ಗಳು ಸಂಪೂರ್ಣವಾಗಿ ಬ್ಲಾಕ್ ತೆರವುಗೊಳಿಸುವವರೆಗೆ ವೈ-ಫೈ (Wi-Fi) ಅಥವಾ ಬೇರೆ ನೆಟ್‌ವರ್ಕ್ ಬಳಸಿ ಪ್ರಯತ್ನಿಸುವುದು ಮತ್ತೊಂದು ಸುಲಭ ಪರಿಹಾರವಾಗಿದೆ.
ನೆಟ್‌ವರ್ಕ್ ಆಪರೇಟರ್‌ಗಳು ಸಂಪೂರ್ಣವಾಗಿ ಬ್ಲಾಕ್ ತೆರವುಗೊಳಿಸುವವರೆಗೆ ವೈ-ಫೈ (Wi-Fi) ಅಥವಾ ಬೇರೆ ನೆಟ್‌ವರ್ಕ್ ಬಳಸಿ ಪ್ರಯತ್ನಿಸುವುದು ಮತ್ತೊಂದು ಸುಲಭ ಪರಿಹಾರವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ