ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಸುಸ್ತಾದರೂ ಹೃದಯದ ಖಾಯಿಲೆಯೇನೋ ಎಂದು ಜನ ಪರೀಕ್ಷೆಗೊಳಗಾಗುತ್ತಾರೆ. ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂದರ್ಶನವೊಂದರಲ್ಲಿ ಯಾರು ಇಸಿಜಿ ಪರೀಕ್ಷೆಗೊಳಗಾಗಬೇಕು, ಯಾರಿಗೆ ಅಗತ್ಯವಿಲ್ಲ ಎಂಬುದನ್ನು ಹೇಳಿದ್ದರು.
ಹೃದಯಾಘಾತದ ಪ್ರಕರಣಗಳು ಹೆಚ್ಚಾದಂತೇ ಇತ್ತೀಚೆಗೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ಹೃದಯದ ಸಮಸ್ಯೆಯೆಂದರೆ ತಕ್ಷಣಕ್ಕೆ ಎಲ್ಲರೂ ಇಸಿಜಿ ಪರೀಕ್ಷೆಗೊಳಗಾಗುತ್ತಾರೆ. ಆದರೆ ಇದನ್ನು ಎಲ್ಲರೂ ಮಾಡಬೇಕೇ?
ಡಾ ಸಿಎನ್ ಮಂಜುನಾಥ್ ಪ್ರಕಾರ ಎಲ್ಲರೂ ಇಸಿಜಿ ಪರೀಕ್ಷೆಗೊಳಪಡಬೇಕಿಲ್ಲ. ಯಾರು ಅತಿಯಾದ ಮಾನಸಿಕ ಒತ್ತಡಕ್ಕೊಳಗಾಗಿದ್ದಾರೋ, ಯಾರಿಗೆ ಕುಟುಂಬದಲ್ಲಿ ಹೃದಯದ ಖಾಯಿಲೆಯ ಇತಿಹಾಸವಿದೆಯೋ, ಯಾರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಾರೋ, ಯಾರಿಗೆ ಧೂಮಪಾನ ಅಭ್ಯಾಸವಿದೆಯೋ, ಯಾರಿಗೆ ನಡೆದಾಗ ಅಸಹಜವಾಗಿ ಸುಸ್ತಾಗುತ್ತದೋ ಅಂತಹವರು ಮಾತ್ರ ಪರೀಕ್ಷೆಗೊಳಪಟ್ಟರೆ ಸಾಕು. ಇಲ್ಲದೇ ಹೋದರೆ ಆರೋಗ್ಯವಂತರಾಗಿರುವವರೆಲ್ಲರೂ ಕಡ್ಡಾಯವಾಗಿ ಇಸಿಜಿ ಪರೀಕ್ಷೆಗೊಳಪಡಬೇಕು ಎಂದೇನಿಲ್ಲ ಎಂದು ಅವರು ಹೇಳುತ್ತಾರೆ.