ಬೆಂಗಳೂರು : ಕೇರಳ ರಾಜ್ಯದಲ್ಲಿ ಡೆಲ್ಟಾ ಸೋಂಕಿನ ಭೀತಿ ಎದುರಾಗಿರುವ ಹಿನ್ನಲೆ ಇನ್ಮುಂದೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ನೆರೆಯ ರಾಜ್ಯದಿಂದ ಆಗಮಿಸುವವರು ಆರ್ಟಿಪಿಸಿಆರ್ ನೆಗಟಿವ್ ವರದಿ ಅಥವಾ ಕೋವಿಡ್ ವಾಕ್ಸಿನೇಷನ್ ಪ್ರಮಾಣ ಪತ್ರವನ್ನು ತೋರಿಸಿಯೇ ಕರ್ನಾಟಕಕ್ಕೆ ಬರಬೇಕು ಎಂದು ಸೂಚನೆ ನೀಡಲಾಗಿದೆ. ಇಷ್ಟು ದಿನ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಮಿಸುವವರಿಗೆ ಈ ನಿರ್ಬಂಧ ವಿಧಿಸಲಾಗಿತ್ತು. ಈಗ ಕೇರಳದಲ್ಲೂ ಡೆಲ್ಟಾ ಸೋಂಕಿನ ಭೀತಿ ಮೂಡಿರುವ ಹಿನ್ನಲೆ ಈ ಕ್ರಮ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಟಾಕ್ಸಿ, ಸಾರಿಗೆ, ಸ್ವಂತ ವಾಹನ ಅಥವಾ ರೈಲು ಮತ್ತು ವಿಮಾನದ ಮೂಲಕ ಬರುವವರು 72 ಗಂಟೆ ಮುಂಚಿತವಾಗಿ ಪರೀಕ್ಷೆಗೆ ಒಳಪಟ್ಟು ನೆಗಟಿವ್ ವರದಿ ತರಬೇಕಿರುವುದು ಕಡ್ಡಾಯವಾಗಿದೆ
ಕೇರಳ ಮತ್ತು ರಾಜ್ಯಕ್ಕೆ ದಿನನಿತ್ಯ ಭೇಟಿ ನೀಡುವ ಅಗತ್ಯ ಸೇವೆಯಲ್ಲಿರುವವರು 15 ದಿನದ ಒಳಗಿನ ಕೊರೋನಾ ನೆಗೆಟಿವ್ ರಿಪೋರ್ಟ್ ನೀಡಿದರೆ ಸಾಕು. ಎರಡು ಡೋಸ್ ಲಸಿಕೆ ಪಡೆದಿದ್ದರೇ ಟೆಸ್ಟ್ ಬೇಕಿಲ್ಲ. ಕೆಲವು ತುರ್ತು ಸಂದರ್ಭದಲ್ಲಿ ಟೆಸ್ಟ್ ಕಡ್ಡಾಯವಲ್ಲ. ಎರಡು ವರ್ಷದ ಒಳಗಿನ ಮಕ್ಕಳಿಗೆ ಟೆಸ್ಟ್ ಕಡ್ಡಾಯವಲ್ಲ