ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಕೊಲೆ ಆರೋಪ ಆಧಾರವಿಲ್ಲದ್ದು, ಇದು ಬಿಜೆಪಿಯವರ ಕುತಂತ್ರ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಕೊಲೆ ಆರೋಪ ಆಧಾರವಿಲ್ಲದ್ದು, ಇದು ಬಿಜೆಪಿಯವರ ಕುತಂತ್ರ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ತುಮಕೂರಿನ ನಾಗವಲ್ಲಿ ಸಮೀಪದ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿ, ಯೋಗೀಶಗೌಡರ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಪಾತ್ರವಿದೆ. ಡಿವೈಎಸ್‍ಪಿ ರಾಜಿಸಂಧಾನ ಸಭೆ ನಡೆಸಿದ್ದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸಚಿವರು, ಯೋಗೀಶ ಗೌಡ ಮತ್ತು ಅವರ ಸ್ನೇಹಿತರ ನಡುವೆ ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ ಎಂದರು.
ಅಲ್ಲದೆ, ಅವರ ಸ್ನೇಹಿತರ ಮೇಲೆ 25 ಕೇಸುಗಳಿವೆ. ಅದರಲ್ಲಿ 5 ಕೊಲೆ ಯತ್ನ ಪ್ರಕರಣಗಳಿವೆ. ಇದಕ್ಕೆ ವಿನಯ್ ಕುಲಕರ್ಣಿಯವರ ಪಾತ್ರವಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ವಕೀಲ ಆನಂದ್ ಎಂಬುವವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದ್ದು, ಧ್ವನಿ ಸುರುಳಿಯನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು ಎಂದರು.