Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರಯಾಣಿಕರನ್ನ ಕೂರಿಸಿಕೊಂಡು ಅತಿವೇಗದಿಂದ ಅಡ್ಡಾದಿಡ್ಡಿ ಆಟೋ ಚಲಾಯಿಸಿದ ಆಟೋ ಚಾಲಕನ ನಿರ್ಲಕ್ಷ್ಯಕ್ಕೆ ಮೂವರ ಬಲಿಯಾದ ಘಟನೆ ಬೆಂಗಳೂರಿನ ಚಿಕ್ಕಜಾಲ ಬಳಿಯ ಬಾಗಲೂರಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಆಟೋ ಚಾಲಕ ಕಿರಣ್ (26), ಪ್ರಯಾಣಿಕರಾದ ಅನ್ವರ್ ಹುಸೇನ್ (28) ಮತ್ತು ರಾಹುಲ್ ( 21) ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ವಾಸಪ್ಪ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಪ್ರಯಾಣಿಕರನ್ನ ಕೂರಿಸಿಕೊಂಡು ಬೂದಿಗೆರೆ ಕಡೆಯಿಂದ ಬಾಗಲೂರು ಕಡೆಗೆ ಬರುತ್ತಿದ್ದ ಆಟೋ ರಸ್ತೆಯಲ್ಲಿ ಪಲ್ಟಿ ಹೊಡೆದು ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದು, ಚಿಕ್ಕಜಾಲ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.